ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿರುವ ಕಣ್ಸನ್ನೆ ಬೆಡಗಿ ಪ್ರಿಯ ವಾರಿಯರ್.. ಯಾವ ಚಿತ್ರ? ಇಲ್ಲಿದೆ ಮಾಹಿತಿ

ಒರು ಅದಾರ್ ಲವ್ ಚಿತ್ರದ ಹಾಡಿನ ಕಣ್’ಮಿಟುಕಿಸುವ ದೃಶ್ಯದ ಮೂಲಕ ಲಕ್ಷಾಂತರ ಪಡ್ಡೆ ಹುಡುಗರ ಹೃದಯ ಕದ್ದ ಚೋರಿ ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡ ಸಿನಿಮಾದಲ್ಲಿ ಅಭಿನಯಸಿಸುತ್ತಾರಂತೆ.

ಹೌದು, ಓಂ ಪ್ರಕಾಶ್ ರಾವ್, ರಾಘವ್ ಲೋಕಿ, ಎಸ್. ಮಹೇಂದರ್, ಕಿರಣ್ ಗೋವಿ ಸೇರಿದಂತೆ ಸಾಕಷ್ಟು ಜನರ ಜೊತೆ ಕೆಲಸ ಮಾಡಿ ಅನುಭವ ಹೊಂದಿರುವ ಯುವ ನಿರ್ದೇಶಕ ಕಂ ನಟ ಯೋಗಿ. ಯೋಗಿ ಈಗ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ನಿರ್ದೇಶನವನ್ನೂ ಅವರೇ ಮಾಡುತ್ತಿದ್ದಾರೆ. ಆ ಸಿನಿಮಾದ ಹೆಸರು ‘ಯೋಗಿ ಲವ್ಸ್ ಸುಪ್ರಿಯಾ’!

ಕನ್ನಡದ ‘ಯೋಗಿ ಲವ್ಸ್ ಸುಪ್ರಿಯಾ’ ಚಿತ್ರದಲ್ಲಿ ನಟಿಸಲು ಪ್ರಿಯಾ ವಾರಿಯರ್ ಒಪ್ಪಿಕೊಂಡಿದ್ದಾರಂತೆ ಎನ್ನಲಾಗಿದ್ದು, ಪ್ರಿಯಾ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಯೋಗಿ ಅವರು ಕೊಚ್ಚಿಯಲ್ಲಿರುವ ತಮ್ಮ ಸ್ನೇಹಿತರಿಂದ ಪ್ರಿಯಾ ಕುರಿತು ಮಾಹಿತಿ ಕಲೆ ಹಾಕಿ ನಂತರ ಪ್ರಿಯಾ ಅವರನ್ನು ಭೇಟಿ ಮಾಡಿ, ಸಿನಿಮಾದ ಕುರಿತು ಮಾತುಕತೆ ನಡೆಸಿದ್ದಾರಂತೆ. ಇದಕ್ಕೆ ಪ್ರಿಯಾ ಒಪ್ಪಿಕೊಂಡಿದ್ದು, ಕೊನೆಯ ಸುತ್ತಿನ ಮಾತುಕತೆ ಮಾತ್ರ ಬಾಕಿ ಉಳಿದಿದೆಯಂತೆ.

Facebook Auto Publish Powered By : XYZScripts.com