‘ಕನ್ನಡಿಗರು ಮುಚ್ಕೊಂಡ್ ಕೂತ್ಕೊಳ್ಳಿ’: ಫೇಸ್ ಬುಕ್ನಲ್ಲಿ ತೆಲುಗು ಸಿನಿ’ಭಕ್ತ’ರ ಗೇಲಿ.!

‘ಕನ್ನಡಿಗರು ಮುಚ್ಕೊಂಡ್ ಕೂತ್ಕೊಳ್ಳಿ’: ಫೇಸ್ ಬುಕ್ನಲ್ಲಿ ತೆಲುಗು ಸಿನಿ’ಭಕ್ತ’ರ ಗೇಲಿ.!

ಕಾವೇರಿ ನೀರು ವಿವಾದಕ್ಕೆ ಸಂಬಂಧಪಟ್ಟಂತೆ ತಮಿಳು ನಟ ಸತ್ಯರಾಜ್ ಹಲವು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದರಿಂದ ಕನ್ನಡಿಗರನ್ನ ರೊಚ್ಚಿಗೆಬ್ಬಿಸಿದೆ.

ಇದೇ ಕಾರಣಕ್ಕೆ ಸತ್ಯರಾಜ್ ಅಭಿನಯದ ತೆಲುಗು ಚಿತ್ರ ‘ಬಾಹುಬಲಿ-2’ ಬಿಡುಗಡೆಗೆ ಕರ್ನಾಟಕದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. ಸತ್ಯರಾಜ್ ಬಹಿರಂಗ ಕ್ಷಮಾಪಣೆ ಕೇಳುವವರೆಗೂ, ‘ಬಾಹುಬಲಿ-2’ ಚಿತ್ರಕ್ಕೆ ಕರುನಾಡಲ್ಲಿ ಬಿಡುಗಡೆ ಭಾಗ್ಯವಿಲ್ಲ ಎಂಬ ಕನ್ನಡಪರ ಹೋರಾಟಗಾರರ ಕೂಗು ಟಾಲಿವುಡ್ ವರೆಗೂ ಕೇಳಿಸಿದೆ.[ಸುದೀಪ್ ಚಿತ್ರಗಳನ್ನ ಬ್ಯಾನ್ ಮಾಡಿ: ಕನ್ನಡಿಗರಿಗೆ ‘ಟ್ರೋಲ್ ಟಾಲಿವುಡ್’ ಲೇವಡಿ.!]

ಇದನ್ನೆಲ್ಲ ಸಹಿಸದ ತೆಲುಗು ಸಿನಿ’ಭಕ್ತ’ರು ಫೇಸ್ ಬುಕ್ ನಲ್ಲಿ ಕನ್ನಡಿಗರ ಕುರಿತು ಗೇಲಿ ಮಾಡುತ್ತಿದ್ದಾರೆ. ಅಲ್ಲದೇ, ”ಮಾಡುವ ಹಾಗಿದ್ರೆ, ‘ಬಾಹುಬಲಿ’ ತರಹ ಸಿನಿಮಾ ಮಾಡಿ. ಇಲ್ಲಾಂದ್ರೆ ಮುಚ್ಕೊಂಡ್ ಕೂತ್ಕೊಳ್ಳಿ” ಎಂದು ‘ಟ್ರೋಲ್ ಟಾಲಿವುಡ್’ ಎಂಬ ಫೇಸ್ ಬುಕ್ ಪೇಜ್, ಕನ್ನಡ ಚಿತ್ರರಂಗದ ಬಗ್ಗೆ ಲೇವಡಿ ಮಾಡಿದೆ. ಮುಂದೆ ಓದಿ….

ಕನ್ನಡ ಚಿತ್ರರಂಗ ಹಾಗೂ ಕನ್ನಡ ಪರ ಹೋರಾಟಗಾರರ ವಿರುದ್ಧ ‘ಟ್ರೋಲ್ ಟಾಲಿವುಡ್’ ಎಂಬ ಫೇಸ್ ಬುಕ್ ಪೇಜ್ ಮನಬಂದಂತೆ ಸ್ಟೇಟಸ್ ಅಪ್ ಡೇಟ್ ಮಾಡುತ್ತಿದೆ. ಅವರ ದರ್ಪ ಎಷ್ಟರಮಟ್ಟಿಗಿದೆ ಅಂತ ಈ ಫೇಸ್ ಬುಕ್ ಪೋಸ್ಟ್ ನಲ್ಲಿ ನೀವೇ ನೋಡಿ….
”ಎಷ್ಟೋ ಜನ ಕನ್ನಡಿಗರು ‘ಬಾಹುಬಲಿ’ ರಿಲೀಸ್ ನ ತಡೆಯಲು ಟ್ರೈ ಮಾಡುತ್ತಿದ್ದಾರೆ. ಅಫ್ ಕೋರ್ಸ್, ಏನೂ ಕೀಳೋಕೆ ಆಗಲ್ಲ. ಅದು ಬೇರೆ ವಿಷಯ. ಮಾಡುವ ಹಾಗಿದ್ರೆ, ‘ಬಾಹುಬಲಿ’ ತರಹ ಸಿನಿಮಾ ಮಾಡಿ. ಇಲ್ಲಾಂದ್ರೆ ನೋಡಿ… ಇದು ಯಾವುದೂ ಆಗ್ಲಿಲ್ಲ ಅಂದ್ರೆ ಮುಚ್ಕೊಂಡು ಕೂತ್ಕೊಳ್ಳಿ. ಅದು ಬಿಟ್ಟು ಸತ್ಯರಾಜ್ ಕನ್ನಡಿಗರ ವಿರುದ್ಧ ಅಂತ ಸುದ್ದಿ ಮಾಡಬೇಡಿ. ನೀವು ಎಷ್ಟೇ ಪ್ರತಿಭಟನೆ ಮಾಡಿದ್ರೂ, ‘ಬಾಹುಬಲಿ’ ಕರ್ನಾಟಕದಲ್ಲಿ ಮೊದಲ ದಿನ ರೆಕಾರ್ಡ್ ಮಾಡುತ್ತೆ” – ಟ್ರೋಲ್ ಟಾಲಿವುಡ್ [ಕಟ್ಟಪ್ಪನ ಮೇಲೆ ಕೋಪ: ಕನ್ನಡಿಗರಿಂದ ‘ಬಾಹುಬಲಿ-1’ ಮರುಪ್ರದರ್ಶನ ರದ್ದು]

ಕೆಲವೇ ದಿನಗಳ ಹಿಂದೆಯಷ್ಟೇ ತಮಿಳು ನಟ ಸತ್ಯರಾಜ್ ಅಭಿನಯದ ‘ಮೊಟ್ಟಾ ಶಿವ ಕೆಟ್ಟ ಶಿವ’ ಎಂಬ ತಮಿಳು ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಆಗಿತ್ತು. ಇಲ್ಲಿಯವರೆಗೂ ಆ ಚಿತ್ರದ ವಿರುದ್ಧ ಪ್ರತಿಭಟನೆ ಮಾಡದ ಕನ್ನಡಿಗರು ತೆಲುಗಿನ ‘ಬಾಹುಬಲಿ-2’ ಚಿತ್ರದ ವಿರುದ್ಧ ಮಾತ್ರ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ ಎಂಬುದು ಕೆಲವರ ಪ್ರಶ್ನೆಯಾಗಿದೆ.[‘ಕಟ್ಟಪ್ಪನ ವಿವಾದ’ದ ಬಗ್ಗೆ ರಾಜಮೌಳಿ ಹೇಳಿದ್ದೇನು?]

ಕನ್ನಡ ಪರ ಹೋರಾಟಗಾರರ ತಾಕತ್ತು ಇಷ್ಟೇ ಅಂತ ‘ಟ್ರೋಲ್ ಟಾಲಿವುಡ್’ ಹಾಕಿರುವ ಫೋಟೋನ ಒಮ್ಮೆ ಗಮನಿಸಿ.[‘ಬಾಹುಬಲಿ-2′ ಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲ, ತಮಿಳುನಾಡಿನಲ್ಲೂ ಕಂಟಕ!]
”ಬಾಹುಬಲಿ’ ಈ ಬಾರಿ ಸಾವಿರ ಕೋಟಿ ಕಲೆಕ್ಷನ್ ಮಾಡುತ್ತೆ. ಅದು ಕನ್ನಡ ಚಿತ್ರರಂಗದ ವಾರ್ಷಿಕ ಆದಾಯಕ್ಕಿಂತ ಹೆಚ್ಚು.! ಹೀಗಿದ್ದರೂ, ಕರ್ನಾಟಕದಲ್ಲಿ ‘ಬಾಹುಬಲಿ’ ಬ್ಯಾನ್ ಮಾಡಿದರೆ ದೊಡ್ಡ ಲಾಸ್ ಆಗುತ್ತೆ ಎಂಬ ಭ್ರಮೆ ಕನ್ನಡಿಗರಿಗೆ’ – ಟ್ರೋಲ್ ಟಾಲಿವುಡ್.

”ಇವೆಲ್ಲದಕ್ಕೂ ಪರಿಹಾರ ಏನು ಅಂದ್ರೆ… ತೆಲುಗು ನಿರ್ಮಾಪಕರು, ತೆಲುಗು ಚಿತ್ರಗಳನ್ನ ಕನ್ನಡ ವಿತರಕರಿಗೆ ಕೊಡುವುದನ್ನು ನಿಲ್ಲಿಸಬೇಕು. ದುಡ್ಡು ಹೋದರೆ ಹೋಗಲಿ. ನಮ್ಮ ಥಿಯೇಟರ್ ಗಳಲ್ಲೇ ಇನ್ನೂ ಎರಡು ವಾರ ಹೆಚ್ಚು ಓಡಿದರೆ ದುಡ್ಡು ಬರುತ್ತದೆ. ಆದ್ರೆ, ನಮ್ಮ ಸಿನಿಮಾಗಳು ಇಲ್ಲದೇ ಹೋದರೆ ಕನ್ನಡ ನಿರ್ಮಾಪಕರು ಹೇಗೆ ಬದುಕಲು ಸಾಧ್ಯ.?” – ಟ್ರೋಲ್ ಟಾಲಿವುಡ್.

”ಬುಕ್ ಮೈ ಶೋ’ನಲ್ಲಿ ಈಗಾಗಲೇ ಬುಕ್ಕಿಂಗ್ ಓಪನ್ ಆಗಿದೆ. ಕನ್ನಡಿಗರು ಏನೂ ಮಾಡಲು ಸಾಧ್ಯವಿಲ್ಲ” ಅಂತಲೂ ಕೆಲವರು ಕಾಮೆಂಟ್ ಮಾಡಿದ್ದಾರೆ.
ಇಷ್ಟೆಲ್ಲ ಟ್ರೋಲ್ ಗಳನ್ನ ನೋಡಿದ ಮೇಲೆ ಸ್ವಾಭಿಮಾನಿ ಕನ್ನಡಿಗರ ಪ್ರತಿಕ್ರಿಯೆ ಏನು.? ನಿಮ್ಮ ಅಭಿಪ್ರಾಯಗಳನ್ನ ನಮ್ಮೊಂದಿಗೆ ಹಂಚಿಕೊಳ್ಳಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ….

Courtesy: Filmibeat

Facebook Auto Publish Powered By : XYZScripts.com