ಕನ್ನಡದ ‘ಕುರುಕ್ಷೇತ್ರ’ಕ್ಕೆ ಮುಹೂರ್ತ ಫಿಕ್ಸ್!

ಸ್ಯಾಂಡಲ್ ವುಡ್ ಮಟ್ಟಿಗೆ ಸದ್ಯ ದೊಡ್ಡ ಸುದ್ದಿ ಮಾಡುತ್ತಿರುವ ‘ಕುರುಕ್ಷೇತ್ರ’ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕನ್ನಡದ ಟಾಪ್ ನಟರು ಒಟ್ಟಿಗೆ ಅಭಿನಯಿಸಲಿದ್ದು, ಇಡೀ ಚಿತ್ರಜಗತ್ತಿನ ಕಣ್ಣು ಈ ಚಿತ್ರದ ಮೇಲೆ ಬಿದ್ದಿದೆ.

ಇಷ್ಟು ದಿನ ಯಾವೆಲ್ಲ ನಟರು ಕಾಣಿಸಿಕೊಳ್ಳಿದ್ದಾರೆ, ಯಾವಾಗ ಸಿನಿಮಾ ಶುರುವಾಗುತ್ತೆ? ಯಾವಾಗ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆಗಳು ಹೋದಲ್ಲಿ ಬಂದಲ್ಲಿ ಕೇಳಿ ಬರುತ್ತಲೇ ಇತ್ತು. ಇದೆಕ್ಕೆಲ್ಲ ನಿರ್ಮಾಪಕ ಮುನಿರತ್ನ ಅವರು ಸ್ವಷ್ಟನೆ ನೀಡಿದ್ದಾರೆ.

ಮಹಾಭಾರತದ ಕಥಾವಸ್ತುವನ್ನಿಟ್ಟು ಮಾಡಲಾಗುತ್ತಿರುವ ‘ಕುರುಕ್ಷೇತ್ರ’ ಜುಲೈ 23ಕ್ಕೆ ಶುರುವಾಗಲಿದೆ. ಅಂದು ನಿರ್ಮಾಪಕ ಮುನಿರತ್ನ ಅವರ ಹುಟ್ಟುಹಬ್ಬವಿದ್ದು, ಅದೇ ದಿನ ಚಿತ್ರದ ಪೂಜೆ ಕಾರ್ಯಕ್ರಮ ನೆರವೇರಸಲಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ‘ಕುರುಕ್ಷೇತ್ರ’ ಚಿತ್ರದಲ್ಲಿ ಕುರು ಸಾರ್ವಭೌಮ ‘ದುರ್ಯೋಧನ’ನಾಗಿ ಮಿಂಚಲಿದ್ದಾರಂತೆ. ಈ ಹಿಂದೆ ‘ಸಂಗೊಳ್ಳಿ ರಾಯಣ್ಣ’ನಾಗಿ ಅಬ್ಬರಿಸಿದ್ದ ದಾಸ ಈಗ ‘ದುರ್ಯೋಧನ’ನಾಗಿ ಬಣ್ಣ ಹಚ್ಚಲಿದ್ದಾರೆ ಎಂದು ಸ್ವತಃ ನಿರ್ಮಾಪಕರೇ ಸ್ವಷ್ಟಪಡಿಸಿದ್ದಾರೆ.

ಪಂಚ ಪಾಂಡವರಲ್ಲಿ ಪ್ರಥಮರಾದ ‘ಧರ್ಮರಾಯ’ನ ಪಾತ್ರಕ್ಕಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅಥವಾ ಡಾ.ಶಿವರಾಜ್ ಕುಮಾರ್ ಅವರನ್ನ ಕರೆತರುವ ವಿಶ್ವಾಸದಲ್ಲಿದ್ದಾರಂತೆ ನಿರ್ಮಾಪಕರು. ಆದ್ರೆ, ಅದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತೆ ಎಂಬುದನ್ನ ಕಾದುನೋಡಬೇಕಿದೆ.

ನಟ ಉಪೇಂದ್ರ ಅವರನ್ನ ಭೀಮನ ಪಾತ್ರದಲ್ಲಿ ನೋಡಬೇನ್ನುವ ಆಸೆ ನಿರ್ಮಾಪಕ ಮುನಿರತ್ನ ಅವರಿಗಿದೆ. ಹೀಗಾಗಿ, ಭೀಮನ ಪಾತ್ರಕ್ಕೆ ಉಪ್ಪಿಯನ್ನ ಅಪ್ರೋಚ್ ಮಾಡಲಾಗುವುದಂತೆ.

‘ಅರ್ಜುನ’ ಪಾತ್ರಕ್ಕಾಗಿ ಯಾವ ನಟ ಸೂಕ್ತವೆಂದು ಚರ್ಚೆ ಆಗುತ್ತಿದ್ದು, ಈ ಪಾತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಿವೆ ಮೂಲಗಳು.

ಕುರುಕ್ಷೇತ್ರದಲ್ಲಿ ‘ಭೀಷ್ಮನ ಪಾತ್ರ ತುಂಬಾ ಮುಖ್ಯವಾಗಿರುತ್ತೆ. ಬೆಳ್ಳಿತೆರೆಯಲ್ಲಿ ಈ ಪಾತ್ರವನ್ನ ರೆಬೆಲ್ ಸ್ಟಾರ್ ಅಂಬರೀಶ್ ಅವರು ಮಾಡುವ ಸಾಧ್ಯತೆಯಿದೆ ಎಂದು ನಿರ್ಮಾಪಕರೇ ಸ್ವಷ್ಟನೆ ನೀಡಿದ್ದಾರೆ. ಈಗಾಗಲೇ ಅಂಬರೀಶ್ ಅವರ ಬಳಿ ಭೀಷ್ಮನ ಪಾತ್ರದಲ್ಲಿ ಅಭಿನಯಿಸುವಂತೆ ಮಾತುಕತೆ ಕೂಡ ನಡೆಸಿದ್ದಾರಂತೆ.

ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಒಟ್ಟಾಗಿ ಅಭಿನಯಿಸುವುತ್ತಿರುವ ‘ಕುರುಕ್ಷೇತ್ರ’ ಚಿತ್ರದಲ್ಲಿ ‘ದ್ರೌಪದಿ’ ಯಾರಾಗಬಹುದು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಆದ್ರೆ, ‘ದ್ರೌಪದಿ’ ಪಾತ್ರಕ್ಕಾಗಿ ನಿರ್ಮಾಪಕರ ಕಣ್ಣು ಬಹುಭಾಷಾ ನಟಿ ಅನುಷ್ಕ ಶೆಟ್ಟಿ ಮೇಲೆ ಬಿದ್ದಿದೆಯಂತೆ.

ಸದ್ಯ ‘ಕುರುಕ್ಷೇತ್ರ’ ಚಿತ್ರದ ಬಗ್ಗೆ ಅಧೀಕೃತವಾಗಿ ಖಚಿತವಾಗಿಲ್ಲ ಎಂದು ಸುದೀಪ್ ಸ್ವಷ್ಟನೆ ನೀಡಿದ್ದಾರೆ. ಇದುವರೆಗೂ ಮುನಿರತ್ನ ಅವರು ದರ್ಶನ್ ಒಬ್ಬರನ್ನ ಬಿಟ್ಟು ಯಾರೊಂದಿಗೆ ಮಾತುಕತೆ ನಡೆಸಿಲ್ಲವಂತೆ. ಆದ್ರೆ, ಈ ಪಾತ್ರಗಳಿಗೆ ಇವರನ್ನೇ ಎಂದು ಫಿಕ್ಸ್ ಆಗಿದ್ದಾರೆ. ಈ ಕುರುಕ್ಷೇತ್ರದಲ್ಲಿ ಕನ್ನಡದ ನಟರು ಮಾಥ್ರ ಇರಲಿದ್ದು, ಅದರಲ್ಲೂ ಬಿಗ್ ಸ್ಟಾರ್ ನಟರು ಮಾತ್ರ ಅಭಿನಯಿಸಲಿದ್ದಾರಂತೆ.

ಕನ್ನಡದ ಈ ಮೆಗಾಮೂವಿಗೆ ನಾಗಣ್ಣ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ‘ಸಂಗೊಳ್ಳಿ ರಾಯಣ್ಣ’ ಅಂತಹ ಐತಿಹಾಸಿಕ ಚಿತ್ರವನ್ನ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ನಾಗಣ್ಣ, ಈಗ ಮತ್ತೊಂದು ಮಹಾ ಚಿತ್ರಕ್ಕೆ ಸಜ್ಜಾಗಿದ್ದಾರೆ.

Courtesy: Filmi Beat

Facebook Auto Publish Powered By : XYZScripts.com