ಕಟಪ್ಪನ ಮೇಲಿನ ಸಿಟ್ಟು : ಬಾಹುಬಲಿ ಬಿಡುಗಡೆ ದಿನ ಬೆಂಗಳೂರು ಬಂದ್

ಬಹುನಿರೀಕ್ಷಿತ  ‘ಬಾಹುಬಲಿ-2’ ಚಿತ್ರ ಏಪ್ರಿಲ್ 28 ರಂದು ಬಿಡುಗಡೆಯಾಗುತ್ತಿದ್ದು, ಚಿತ್ರ ಪ್ರೇಮಿಗಳು ಕಾತರದಿಂದ ಚಿತ್ರಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಕಟ್ಟಪ್ಪ ಪಾತ್ರ ನಿರ್ವಹಿಸಿರುವ ಸತ್ಯಜಿತ್ ಹೇಳಿಕೆಯಿಂದ ಕೆರಳಿರುವ ಕನ್ನಡಪರ ಸಂಘಟನೆಗಳು ಇದೀಗ ಚಿತ್ರ ಬಿಡುಗಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಯಾವುದೇ ಕಾರಣಕ್ಕೂ ಚಿತ್ರಬಿಡುಗಡೆಗೆ ಅವಕಾಶ ನೀಡೋದಿಲ್ಲ ಎಂದು ಸ್ಪಷ್ಟಪಡಿಸಿವೆ. ಈ ನಡುವೆ ಏಪ್ರಿಲ್ 28ರಂದು ಬೆಂಗಳೂರು ಬಂದ್ ನಡೆಸಲು  ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸಿದ್ದತೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಈ ಕುರಿತಂತೆ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಕನ್ನಡಿಗರು ಹಾಗೂ ಜೀವನದಿ ಕಾವೇರಿ ಬಗ್ಗೆ , ಸತ್ಯರಾಜ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲಿ  ಸತ್ಯರಾಜ್  ಬೇಷರತ್ ಕ್ಷಮೆಯಾಚಿಸುವವರೆಗೂ ರಾಜ್ಯದಲ್ಲಿ  ಬಾಹುಬಲಿ-2 ಚಿತ್ರ ಬಿಡುಗಡೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ಏಪ್ರಿಲ್ 28ರಂದು ಕನ್ನಡಪರ ಸಂಘಟನೆಗಳ ಮುಖಂಡರು ಬೆಂಗಳೂರಿನ ಪುರಭವನದಿಂದ ಫ್ರೀಡಂಪಾರ್ಕ್ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ ಎಂದ ವಾಟಾಳ್ ನಾಗರಾಜ್, ಕ್ಷಮೆಯಾಚನೆ ಮಾಡುವವರೆಗೂ ಯಾವುದೇ ಕಾರಣಕ್ಕೂ ಚಿತ್ರಬಿಡುಗಡೆಗೆ ಅವಕಾಶ ನಿಡೋದಿಲ್ಲ ಎಂದರು.

ಕರ್ನಾಟಕ  ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ. ರಾ. ಗೋವಿಂದ್ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಭೂತದಹನ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

Courtesy: Balkani News

Facebook Auto Publish Powered By : XYZScripts.com