‘ಓಂ 2’ ಬರ್ತಾ ಇದೆಯಾ?

‘ಓಂ’ ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಸಿನಿಮಾ. ಉಪೇಂದ್ರ ಅವರ ತಲೆಗೆ, ಶಿವಣ್ಣನ ಕಲೆಗೆ ಒಳ್ಳೆಯ ಬೆಲೆ ಸಿಕ್ಕಿದ್ದು ‘ಓಂ’ ಸಿನಿಮಾದಿಂದ. ಆದರೆ ಈಗ ‘ಓಂ 2’ ಬರುತ್ತಾ ಎಂಬ ಕುತೂಹಲ ಹುಟ್ಟಿದೆ.

‘ಓಂ 2’ ಸಿನಿಮಾದ ಬಗ್ಗೆ ಫೇಸ್ ಬುಕ್ ನಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ನಟ ಉಪೇಂದ್ರ. ಉಪೇಂದ್ರ ನಿನ್ನೆ ಶಿವಣ್ಣನೊಂದಿಗೆ ತೆಗೆದ ಒಂದು ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದರು. ಅದರ ಜೊತೆಗೆ ‘Om 2 coming ?’ ಎಂದು ಬರೆದು ಎಲ್ಲರ ತಲೆಗೆ ಹುಳ ಬಿಟ್ಟಿದ್ದರು.

ಹಾಗಾದ್ರೆ, ಉಪೇಂದ್ರ ಈಗ ಮತ್ತೆ ಶಿವರಾಜ್ ಕುಮಾರ್ ಜೊತೆ ಸೇರಿ ‘ಓಂ 2’ ಸಿನಿಮಾ ಮಾಡುತ್ತಾರ..?

ನಟ ಶಿವರಾಜ್ ಕುಮಾರ್ ಸ್ಟಾರ್ ಸುವರ್ಣ ವಾಹಿನಿಗೆ ಒಂದು ಹೊಸ ಟಾಕ್ ಶೋ ಮಾಡುತ್ತಿದ್ದಾರೆ. ವಿಶೇಷ ಅಂದರೆ ಈ ಕಾರ್ಯಕ್ರಮದ ಮೊದಲ ಅತಿಥಿ ಆಗಿ ನಟ ಉಪೇಂದ್ರ ಭಾಗಿಯಾಗಿದ್ದಾರೆ. ನಂ 1 ಯಾರಿ ವಿತ್ ಶಿವಣ್ಣ ? ಸ್ಟಾರ್ ಸುವರ್ಣ ವಾಹಿನಿಯ ಹೊಸ ಟಾಕ್ ಶೋ. ತೆಲುಗಿನಲ್ಲಿ ಇದೇ ಕಾರ್ಯಕ್ರಮವನ್ನು ನಟ ರಾಣಾ ದಗ್ಗುಬಾಟಿ ನಡೆಸಿಕೊಂಡುತ್ತಿದ್ದಾರೆ. ಕನ್ನಡದ ಈ ಹೊಸ ಕಾರ್ಯಕ್ರಮದ ಮೂಲಕ ಮತ್ತೆ ಶಿವಣ್ಣ ಕಿರುತೆರೆಗೆ ಮರಳಿದ್ದಾರೆ.

ಈ ಕಾರ್ಯಕ್ರಮದ ಶೂಟಿಂಗ್ ವೇಳೆ ಉಪೇಂದ್ರ, ಶಿವಣ್ಣನ ಜೊತೆಗೆ ಒಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ‘Om 2 coming ?’ ಎಂದು ಉಪ್ಪಿ ಬರೆದಿದ್ದಾರೆ. ಇದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತೆ ಆಗಿದೆ. ಉಪೇಂದ್ರ ಅವರ ಈ ಫೋಟೋ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ”ಮತ್ತೆ ಶಿವಣ್ಣನಿಗೆ ಉಪೇಂದ್ರ ನಿರ್ದೇಶನ ಮಾಡಲಿ.. ‘ಓಂ 2’ ಸಿನಿಮಾ ಬರಲಿ” ಎಂದು ಸಾಕಷ್ಟು ಜನರು ಕಮೆಂಟ್ಸ್ ಮಾಡುತ್ತಿದ್ದಾರೆ.

‘Om 2 coming ?’ ಎಂದು ಬರೆದಿರುವ ಉಪ್ಪಿ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದ್ದಾರೆ. ಆದರೆ ‘ಓಂ 2’ ಸಿನಿಮಾ ಬರುವ ಸಾಧ್ಯತೆ ತುಂಬ ಕಡಿಮೆ ಇದೆ. ಯಾಕೆಂದರೆ ಉಪೇಂದ್ರ ಸದ್ಯ ಸಿನಿಮಾ ಬಿಟ್ಟು ಪ್ರಜಾಕೀಯದ ಕೆಲಸದಲ್ಲಿ ಬಿಜಿ ಇದ್ದಾರೆ. ಇತ್ತ ಶಿವಣ್ಣನ ಸಿನಿಮಾಗಳ ದೊಡ್ಡ ಲಿಸ್ಟ್ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ‘ಓಂ 2’ ಎಂಬ ಹೆಸರಿಗೆ ಅಷ್ಟೇ ಒಳ್ಳೆಯ ಕಥೆ ಬೇಕಾಗಿದೆ.

Facebook Auto Publish Powered By : XYZScripts.com