ಒಳ್ಳೆಯ ಸ್ಮಶಾನ ಹುಡುಕಾಟದಲ್ಲಿ ಗುರುಪ್ರಸಾದ್!

ನಿರ್ದೇಶಕ ಗುರು ಪ್ರಸಾದ್ ಅವರು ಸದ್ಯ ಸ್ಮಶಾನ ಹುಡುಕಾಟದಲ್ಲಿ ಬ್ಯುಸಿಯಾಗಿದ್ದಾರಂತೆ. ಹೌದು, ಗುರುಪ್ರಸಾದ್ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಆ ಚಿತ್ರದ ಚಿತ್ರೀಕರಣ ಬಹುತೇಕ ಸ್ಮಶಾನದಲ್ಲೇ ನಡೆಯುವುದರಿಂದ, ಅಂತಹ ಸ್ಮಶಾನಕ್ಕಾಗಿ ಹುಡುಕಾಟ ನಡೆಸಿದ್ದಾರೆ ಗುರು.

ಮೊನ್ನೆತಾನೆ ಸೆಟ್ಟೇರಿರುವ ‘ಅದೆಮಾ’ ಚಿತ್ರದ ಚಿತ್ರೀಕರಣ ಬಹುತೇಕ ಸ್ಮಶಾನದಲ್ಲೇ ನಡೆಯುವುದರಿಂದ ಸ್ಮಶಾನಗಳಿಗಾಗಿ ಗುರುಪ್ರಸಾದ್ ಮತ್ತು ಅವರ ತಂಡ ಹುಡುಕಾಟ ಶುರು ಮಾಡಿಕೊಂಡಿದೆ. ಸ್ಮಶಾನ ಸಿಗುತ್ತಿದ್ದಂತೆ ಚಿತ್ರೀಕರಣ ಶುರು ಮಾಡುತ್ತಾರಂತೆ.

ಈ ಬಾರಿ ಗುರು ಅವರು ಸಂಪೂರ್ಣವಾಗಿ ಔಟ್ ಡೋರ್ ಶೂಟಿಂಗ್ ಮಾಡಲು ನಿರ್ಧರಿಸಿದ್ದು, ಕರ್ನಾಟಕದ ಸುಂದರ ತಾಣಗಳಲ್ಲಿ ಅದೇಮಾ ಚಿತ್ರೀಕರಣ ಮಾಡಲಿದ್ದಾರಂತೆ ಹಾಗೂ ಇದುವರೆಗೂ ತಮ್ಮ ಚಿತ್ರಗಳನ್ನು ಕೆಲವೇ ಲಕ್ಷಗಳಲ್ಲಿ ಮುಗಿಸುತ್ತಿದ್ದ ಗುರು, ಈ ಬಾರಿ ಲಕ್ಷದಿಂದ ಕೋಟಿ ಬಜೆಟ್ ನಲ್ಲಿ ಸಿನಿಮಾ ಮಾಡಲಿದ್ದಾರೆ.

Courtesy: Kannada News Now

Facebook Auto Publish Powered By : XYZScripts.com