ಒಮ್ಮೆಲೇ ಪರದೇಸಿ ಆದ ವಿಜಯ ರಾಘವೇಂದ್ರ… ಏನಾಯಿತು ಇಲ್ಲಿ ಓದಿ

ನಟ ವಿಜಯ್ ರಾಘವೇಂದ್ರ ಈಗ ಅಕ್ಷರಶಃ ಪರದೇಶಿಯಾಗಿಬಿಟ್ಟಿದ್ದಾರೆ. ಅರೇ, ಅವರಿಗೇನಾಯ್ತು ಅಂತ ಯೋಚಿಸುವ ಮುನ್ನ ಈ ಸ್ಟೋರಿ ನೋಡಿ.

ವಿಜಯ್ ಇದೀಗ ಸದ್ದಿಲ್ಲದೇ ಇನ್ನೊಂದು ಚಿತ್ರ ಒಪ್ಪಿಕೊಂಡಿದ್ದು,ನಿನ್ನೆ ಬುಧವಾರ ಮುಹೂರ್ತ ಸಹ ನಡೆದಿದೆ.ಮಾಜಿ ಸಚಿವ ಜನಾರ್ಧನ್ ರೆಡ್ಡಿ ಕ್ಲಾಫ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಹಿಂದೆ ‘ರಾಜ ಲವ್ಸ್ ರಾಧೆ’ ಮಾಡಿದ್ದ ಚಿತ್ರ ತಂಡ , ಈ ಚಿತ್ರದ ಬಿಡುಗಡೆಗೂ ಮುನ್ನವೇ ‘ಪರದೇಸಿ ಕೇರಾಫ್ ಲಂಡನ್’ ಚಿತ್ರವನ್ನು ಮಾಡುತ್ತಿದೆ. ಎಂ, ರಾಜಶೇಖರ್ ನಿರ್ದೇಶಕರಾಗಿದ್ದರೆ , ವೀರ ಸಮರ್ಥ ಸಂಗೀತ ನೀಡುತ್ತಿದ್ದಾರೆ. ಅನಾಥಾಶ್ರಮದಲ್ಲಿ ವಾಸಿಸುವ ಪರದೇಸಿ ಕಥೆಗೂ ಲಂಡನ್ ಗೂ ಏನ್ ಸಂಭಂದ ಎನ್ನುವುದನ್ನು ಈ ಚಿತ್ರ ಬಿಡುಗಡೆಯಾದ ಮೇಲೆ ಗೊತ್ತಾಗುತ್ತದೆ.

ಈ ಚಿತ್ರಕ್ಕೆ ಸ್ನೇಹಾ ಹಾಗೂ ಪೂಜಾ ಎಂಬ ಇಬ್ಬರು ನಾಯಕಿಯರಿದ್ದು, ತಬಲಾನಾಣಿ, ಯತಿರಾಜ್ ಹಾಗೂ ಪೆಟ್ರೋಲ್ ಪ್ರಸನ್ನ ಅವರೂ ಸಹ ಅಭಿನಯಿಸುತ್ತಿದ್ದಾರೆ. ಮಾರ್ಚ 5 ರಿಂದ ಬೆಂಗಳೂರು, ಸಿರಗುಪ್ಪ, ಮೈಸೂರು ಇತರೆಡೆ ಚಿತ್ರೀಕರಣ ನಡೆಯಲಿದೆ.

Facebook Auto Publish Powered By : XYZScripts.com