ಒಂದೇ ವಾರದಲ್ಲಿ ರೋಸಿ ಹೋಗಿದ್ದಾರೆಯೇ ಬಿಗ್ ಬಾಸ್ ಸೀಸನ್-6 ನ ಸ್ಪರ್ಧಿಗಳು?.. ಇಲ್ಲಿ ಓದಿ

ಭಾನುವಾರ ನಡೆದ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಬಿಗ್ ಬಾಸ್ ಮನೆ ಪ್ರವೇಶಿಸಿದ ನಂತರ ಶಿವಣ್ಣನೊಂದಿಗೆ ಸ್ಪರ್ಧಿಗಳು ಮಾತಿಗೆ ಇಳಿದರು, ತಮ್ಮ ಇಷ್ಟವಾದ ತಿನಿಸುಗಳ ಬಗ್ಗೆ ತಿಳಿಸಿದರು. ಹಾಗೆ ಶಿವಣ್ಣ ಇವೆಲ್ಲವನ್ನೂ ಸ್ಪರ್ಧಿಗಳಿಗೆ ಸ್ವತಃ ತಮ್ಮ ಮನೆಯಿಂದ ಕಳಿಸಿಕೊಡುವುದಾಗಿ ಮಾತು ನೀಡಿದರು, ತದ ನಂತರ ವೇದಿಕೆಗೆ ಬಂದ ಶಿವಣ್ಣ ಸ್ಪರ್ಧಿಗಳಿಗೆ ಬಿರಿಯಾನಿ, ಮಟನ್ ಪ್ರೈ ಹಾಗೂ ಜೋಳದ ರೊಟ್ಟಿ ಕಳಿಸಿಕೊಡುತ್ತೇನೆ ಅದನ್ನು ಅವರಿಗೆ ತಲುಪಿಸಿ ಎಂದು ಕಿಚ್ಚನ ಬಳಿ ಮನವಿ ಮಾಡಿಕೊಂಡರು.

ಇದನ್ನು ಕೇಳಿ ಸುದೀಪ್ ಒಂದು ಕ್ಷಣ ಅಚ್ಚರಿಯಾದರು .. .ಒಂದೇ ವಾರಕ್ಕೆ ಸ್ಪರ್ಧಿಗಳು ಊಟಕ್ಕೆ ಬೇಡಿಕೆ ಇಟ್ಟಿದ್ದಾರಾ? ಎಂದು ಕೇಳಿದರು.

ಇದಲ್ಲದೆ ಕಳೆದ ವಾರ ಸ್ಪರ್ದಿಗಳಲ್ಲಿ ವಯುಕ್ತಿಕ ವಿಚಾರಕ್ಕಾಗಿ ಬಹು ದೊಡ್ಡ ಜಗಳ ನಡೆದು ಕೆಲವರು ಬಿಗ್ ಬಾಸ್ ಬಿಟ್ಟು ಹೋಗುವ ಮಾತನ್ನು ಆಡಿದ್ದರು, ಇದೆಲ್ಲದರಿಂದ ವೀಕ್ಷಕರಲ್ಲಿ ಒಂದೇ ವಾರದಲ್ಲಿ ಸ್ಪರ್ಧಿಗಳು ರೋಸಿ ಹೋಗಿದ್ದಾರಾ ಎಂಬ ಪ್ರಶ್ನೆ ಮೂಡಲು ಪ್ರಾರಂಭಿಸಿದೆ.

Facebook Auto Publish Powered By : XYZScripts.com