ಒಂದು ಹುಡುಗಿಗಾಗಿ ಹಲವರ ಸುತ್ತ : ಕನ್ನಡ ಚಿತ್ರರಂಗದಲ್ಲಿ ‘ರೋಗ್’ ಹೊಸ ಪ್ರಯೋಗ

ರೋಗ್’ ಅಂದರೆ ರೋಗ ಅಂದ್ಕೋಬೇಡಿ. ಆದರೆ ಹಾಗೆಂದು ಹೇಳದೆ ಇರುವುದಕ್ಕೂ ಆಗದು ಅಂತನೂ ಹೇಳಬೇಡಿ. ಅಂಜಲಿ ಎಂಬ ಹೆಸರಿನ ಚೆಲುವೆಯರ ಸುತ್ತ ಪೇಮಕಥೆ ಸುತ್ತುವ ಒಂಥರಾ ಇಂಪಾದ, ತಂಪಾದ ಸ್ಟೋರಿಯೇ ‘ರೋಗ್’.

ನಾಯಕ ನಟ ಇಶಾನ್ ಇಲ್ಲಿ ಹೊಸ ಪ್ರತಿಭೆ. ಹೊಸಬನಾದರೂ ಈ ಚಿತ್ರದ  ಮೂಲಕ ಚಿತ್ರರಂಗಕ್ಕೆ ಹೊಸತನವನ್ನು ತಂದುಕೊಟ್ಟಿದ್ದಾರೆ ಇಶಾನ್‌‌. ಉದ್ದನೆಯ ಕಥೆಯನ್ನು ಹೇಳುವ ಬದಲು ಚುಟುಕಾಗಿ ಹೇಳಬೇಕೆಂದರೆ, ‘ರೋಗ್’ ಚಿತ್ರದಲ್ಲಿ ಬರುವ ಹಲವು ಪಾತ್ರಗಳು ಅಂಜಲಿ ಹೆಸರಿನವು.

ನಾಯಕ ಸಂಜು ಮತ್ತು ಅಂಜಲಿ ಪ್ರೇಮಿಗಳು. ಒಬ್ಬರನ್ನೊಬ್ಬರು ಬಿಟ್ಟಿರಲಾರದ ಪೊಸೆಸಿವ್ನೆಸ್. ಆದರೆ ತನ್ನ ಪ್ರಿಯಕರನಿಗಿಂತ ಶ್ರೀಮಂತ ಯುವಕ ಮದುವೆಯಾಗುವುದಾಗಿ ಮುಂದೆ ಬಂದಾಗ ಪ್ರಿಯಕರನಿಗೇ ಗುಡ್ ಬೈ ಹೇಳುವ ಅಂಜಲಿಯ ಸ್ವಾರ್ಥ ಏನೆಲ್ಲಾ ಅನಾಹುತಗಳಿಗೆ ಕಾರಣವಾಗುತ್ತದೆ ಎಂಬುದೇ ‘ರೋಗ್’ ಕಥಾವಸ್ತು.

ತನಗೆ ಕೈಕೊಟ್ಟ ಅಂಜಲಿಯ ಮದುವೆಯನ್ನು ತಡೆಯಲು ಹೋಗಿ ಆ್ಯಕ್ಸಿಡೆಂಟ್ ಮಾಡಿಕೊಂಡು, ಜೈಲು ಸೇರಿದರೂ ಬದಲಾಗದ ಕ್ರೌರ್ಯ‌, ತನ್ನ ಪ್ರೇಮಿ ಅಂಜಲಿ ರೀತಿಯದ್ದೇ ಹುಡುಗಿಯರ ಆಗಮನ, ಮತ್ತದೇ ವಿರಹ ವೇದನೆ. ಜೊತೆಗೆ ಆ ರಾಕ್ಷಸೀ ಸ್ವಭಾವ.. ಹೀಗೆ ಸಾಗುತ್ತದೆ ನಾಟಕೀಯ ಪಯಣ.

ಇಲ್ಲಿ ‘ರೋಗ್’ ಅಂದರೆ ರಾಕ್ಷಸಿ ಸ್ವಭಾವ. ಮನದನ್ನೆ ಅಂಜಲಿ ಕೈಕೊಟ್ಟರೂ ಮತ್ತೆ ಮತ್ತೆ ಸಂಜುಗೆ ಎದುರಾಗುವುದು ಅಂಜಲಿ ಹೆಸರಿನವರೇ. ಒಟ್ಟರೆ ಚಿತ್ರದ ಹೀರೋ ಅಂಜಲಿಯ ಸುತ್ತ ತಿರುಗುವ ಬದಲು, ಇಡೀ ಚಿತ್ರವೇ ಅಂಜಲಿ ಹೆಸರಿನ ಹುಡುಗಿಯರ ಸುತ್ತ ಗಿರಕಿಹೊಡೆಯುತ್ತಿರುತ್ತದೆ‌.

ನಿಶಾನ್ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದರು ಎನ್ನುವುದಕ್ಜಿಂತ ನಿರ್ದೇಶಕರು ಪಟ್ಟ ಶ್ರಮ ಎಷ್ಟಿದೆ ಎಂಬುದು ಗೊತ್ತಾಗುತ್ತದೆ.ಇಷಾನ್ ಮಾತ್ರವಲ್ಲ, ಮನ್ನಾರ್ ಛೋಪ್ರಾ, ಅವಿನಾಶ್, ಸಾಧು ಕೋಕಿಲಾ ಮೊದಲಾದವರ ಅಭಿನುವೂ ಈ ಚಿತ್ರವನ್ನು ಒಂದು ಹಂತದಲ್ಲಿ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ.

ಒಳ್ಳೆಯ ಕಥೆ ಹೆಣೆಯಲಾಗಿದೆ. ಹಾಡುಗಳೂ ಇಂಪಾಗಿವೆ. ಸಂಗೀತದಲ್ಲೂ ಝೇಂಕಾರ ಕಮ್ಮಿಯಿಲ್ಲ. ಪ್ರೇಕ್ಷಕರು ನೀಡಿದ ಟಿಕೆಟ್ ಹಣಕ್ಕೂ ಮೋಸವಾಗಲ್ಲ.

Couretsy: balkani news

Leave a Reply

Your email address will not be published.

Facebook Auto Publish Powered By : XYZScripts.com