ಐಶ್ವರ್ಯ ರೈ “ಏ ದಿಲ್ ಹೇ ಮುಷ್ಕಿಲ್” ಚಿತ್ರಕ್ಕೆ ಅಂಕುಶದ ಆತಂಕ..

ಭಾರತ್ ಪಾಕಿಸ್ತಾನ ಗಡಿ ಕದನದ ಗುಂಡಿನ ಹೊಡೆತ ಐಶ್ವರ್ಯ ರೈ ಸಿನಿ ಬದುಕಿಗೆ ಅಪ್ಪಳಿಸಲಿದೆಯೇ? ಇಂತದ್ದೊಂದು ಆತಂಕ ಕಾಡಿದೆ. ಐಶ್ವರ್ಯ ರೈ ಮಾತ್ರವಲ್ಲ; ಏ ದಿಲ್ ಹೇ ಮುಷ್ಕಿಲ್’ ಚಿತ್ರ ತಂಡಕ್ಕೆ ಅಂಕುಶ ಬೀಳುವ ಆತಂಕ ಕಾಡಿದೆ.
ಸರಬ್ಜಿತ್ ಚಿತ್ರದ ನಂತರ ಐಶ್ವರ್ಯ ರಾಯ್ ಬೋಲ್ಡ್ ಆಗಿ ನಟಿಸಿದ್ದ, ‘ಏ ದಿಲ್ ಹೇ ಮುಷ್ಕಿಲ್’ ಚಿತ್ರ ಬಾಲಿವುಡ್ ಸಿನಿ ಲೋಕದಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ದೀಪಾವಳಿ ಸಡಗರಕ್ಕೆ ರಂಗು ತಂದಿಟ್ಟ ‘ಏ ದಿಲ್ ಹೇ ಮುಷ್ಕಿಲ್’ ಯಶೋಗಾಥೆಯ ಹಾದಿಯಲ್ಲಿ ಸಾಗಿದ್ದರೆ, ಇದೀಗ ನಿಷೇಧ ಸಾಧ್ಯತೆಯ ಕಾರ್ಮೋಡ ಆವರಿಸಿದೆ.
ಐಶ್ವರ್ಯ ರೈ ಬಚ್ಚನ್, ರಣ್ ಬೀರ್ ಕಪೂರ್ ಅಭಿನಯದ ‘ಏ ದಿಲ್ ಹೇ ಮುಷ್ಕಿಲ್’ ಚಿತ್ರ ಪ್ರದರ್ಶನ ರದ್ದುಪಡಿಸಬೇಕೆಂಬ ಒತ್ತಡ ಮುಂಬೈ ಕಡೆ  ಕೇಳಿ ಬಂದಿವೆ.  ಈ ಚಿತ್ರದಲ್ಲಿ ಪಾಕಿಸ್ತಾನಿ ಕಲಾವಿದರು ಅಭಿನಯಿಸಿದ್ದಾರೆ ಎಂಬುದೇ ಇದಕ್ಕೆ ಕಾರಣ.
ಕೆಲ ಸಮಯದಿಂದ ಕಲಾವಿದರ ವಿಚಾರದಲ್ಲಿ ನಿಷೇಧ-ನಿರ್ಬಂಧದ ಚರ್ಚೆ ಕೇಳಿಬರುತ್ತಿದೆ. ಅದರಲ್ಲೂ ಬಾಲಿವುಡ್ ನಲ್ಲಿ ಪಾಕಿಸ್ತಾನ ಕಲಾವಿದರಿಗೆ ಈಗ ಅವಕಾಶ ನೀಡಲಾಗುತ್ತಿಲ್ಲ. ಆದರೆ ಅಷ್ಟರಲ್ಲೇ ‘ಏ ದಿಲ್ ಹೇ ಮುಷ್ಕಿಲ್’ ನಿರ್ಮಾಣವಾಗಿತ್ತು. ಈ ಚಿತ್ರದಲ್ಲಿ ಪಾಕ್ ಕಲಾವಿದರು ಅಭಿನಯಿಸಿರುವುದರಿಂದ ಪ್ರದರ್ಶನ ಮಾಡಬಾರದು ಎಂದು ಆಗ್ರಹ ಕೇಳಿಬಂದಿತ್ತು. ಆದರೂ ತೆರೆ ಕಂಡಿತ್ತು. ಪಾಕಿಸ್ತಾನ ಕಲಾವಿದರು ಮತ್ತು ತಂತ್ರಜ್ಞರು ಇರುವ ಯಾವುದೇ ಚಿತ್ರವನ್ನು ಪ್ರದರ್ಶಿಸದಿರಲು ಭಾರತೀಯ ಚಲನಚಿತ್ರ ಪ್ರದರ್ಶಕರ ಸಂಘ ನಿರ್ಧರಿಸಿತ್ತು. ಆದರೂ ಪ್ರದರ್ಶನ ಗೊಂಡಿರುವುದು ಹಲವು ಸಂಘಟನೆಗಳ ನಾಯಕರ ಹುಬ್ಬೇರುವಂತೆ ಮಾಡಿದೆ. ಈ ಬೆಳವಣಿಗೆಯಿಂದಾಗಿ ಪ್ರದರ್ಶಕರೂ ಒತ್ತಡದಲ್ಲಿ ಸಿಲುಕಿದ್ದು, ‘ಏ ದಿಲ್ ಹೇ ಮುಷ್ಕಿಲ್’ ಚಿತ್ರ ತಂಡಕ್ಕೆ ಮುಂದೇನು ಎಂಬ ಚಿಂತೆ ಎದುರಾಗಿದೆ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com