ಐದು ದಶಕಗಳ ಬಳಿಕ ಜಾಕಿ ಚಾನ್‌ರನ್ನ ಅಪ್ಪಿದ ಆಸ್ಕರ್

ಆಸ್ಕರ್ ಪ್ರಶಸ್ತಿ ಪಡೀಬೇಕು ಎಂದು ಅದೆಷ್ಟೋ ಮಂದಿ ಕಲಾವಿದರು ಕನಸು ಕಾಣುತ್ತಿರುತ್ತಾರೆ. ಆದರೆ ಅವರೆಲ್ಲರಿಗೂ ಅದು ಕನಸಾಗಿಯೇ ಉಳಿದಿರುತ್ತದೆ. ಆ ರೀತಿಯ ಕನಸುಕಂಡಂತ ಒಬ್ಬ ನಟ ಜಾಕಿ ಚಾನ್. ಇದೀಗ ಅವರಿಗೆ 62ನೇ ವರ್ಷದಲ್ಲಿ ಆಸ್ಕರ್ ಪ್ರಶಸ್ತಿ ವರಿಸಿದೆ.
“ಸಿನಿಮಾ ಕ್ಷೇತ್ರದಲ್ಲಿ 62 ವರ್ಷಗಳನ್ನು ಕಳೆದ ಮೇಲೆ, 200ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಮೇಲೆ ಕಡೆಗೆ ಈ ಪ್ರಶಸ್ತಿ ಸಿಕ್ಕಿದೆ” ಎಂದಿದ್ದಾರೆ ಜಾಕಿ ಚಾನ್. ನಾನೊಬ್ಬ ಹೆಮ್ಮೆಯ ಚೈನೀಸ್. ಇನ್ನು ಮುಂದೆಯೂ ಸಿನಿಮಾಗಳಲ್ಲಿ ನಟಿಸುತ್ತೇನೆ. ಹಾರುವುದು, ಕಿಟಕಿ ಮುರಿಯುವುದು, ಜಂಪ್, ಪಂಚ್ ಇವೆಲ್ಲವೂ ಇದ್ದೇ ಇರ್ತಾವೆ ಎಂದಿದ್ದಾರೆ ಜಾಕಿ ಚಾನ್.
ಪ್ರತಿವರ್ಷದ ಸಮಾರಂಭದಲ್ಲಿ ದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ ಏರ್ಪಡಿಸುವ ಸಮಾರಂಭದಲ್ಲಿ ಜಾಕಿ ಚಾನ್ ಅವರಿಗೆ ಗೌರವ ಆಸ್ಕರ್ ಪ್ರಶಸ್ತಿ ದೊರಕಿದೆ. ಇವರ ಜೊತೆಗೆ ಬ್ರಿಟಿಷ್ ಸಿನಿಮಾ ಸಂಕಲನಕಾರ ಆನ್ ವಿ ಕೋಟ್ಸ್, ಕ್ಯಾಸ್ಟಿಂಗ್ ನಿರ್ದೇಶಕ ಲಿನ್ ಸ್ಟಾಲ್ ಮಾಸ್ಟರ್ ಮತ್ತು ಸಾಕ್ಷಚಿತ್ರ ನಿರ್ದೇಶಕ ಫೆಡ್ರಿಕ್ ವೈಸ್ ಮ್ಯಾನ್ ಅವರಿಗೂ ಗೌರವ ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ.
Courtesy: Balkani News

Facebook Auto Publish Powered By : XYZScripts.com