ಐತಿಹಾಸಿಕ ಚಿತ್ರದಲ್ಲಿ ಸುದೀಪ್, ದೀಪಿಕಾ ಪಡುಕೋಣೆ?

ಎಲ್ಲವೂ ಅಂದುಕೊಂಡಂತೆ ಆದರೆ, ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಸೆಟ್ಟೇರಲಿದೆ. ಈ ಐತಿಹಾಸಿಕ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.

‘ಮಾಸ್ತಿಗುಡಿ’ ಪೂರ್ಣಗೊಳಿಸಿರುವ ನಿರ್ದೇಶಕ ನಾಗಶೇಖರ್ ಅವರು ‘ಶಾಂತಲಾ ವಿಷ್ಣುವರ್ಧನ’ ಹೆಸರಿನಲ್ಲಿ ಐತಿಹಾಸಿಕ ಚಿತ್ರವನ್ನು ನಿರ್ದೇಶಿಸಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಸುಮಾರು 60 ಕೋಟಿ ರೂ. ವೆಚ್ಚದ ಈ ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಲಿದ್ದಾರೆ. ಅಂದಹಾಗೆ ನಾಗಶೇಖರ್ ಇನ್ನೂ ಪ್ರಾಥಮಿಕ ಹಂತದ ತಯಾರಿ ನಡೆಸಿದ್ದು, ಸುದೀಪ್ ಅವರಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

ಹೊಯ್ಸಳ ಅರಸ ವಿಷ್ಣುವರ್ಧನ ಮತ್ತು ಶಾಂತಲಾ ಚರಿತ್ರೆಯಾಗಿರುವ ಚಿತ್ರಕ್ಕೆ ಭಾರೀ ಸಿದ್ಧತೆ ಬೇಕಿದ್ದು, ನಾಗಶೇಖರ್ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕೀರವಾಣಿ ಸಂಗೀತ, ಸಾಧುಕೋಕಿಲ ಹಿನ್ನಲೆ ಸಂಗೀತ ನೀಡಲಿದ್ದಾರೆ.

Courtesy: Kannada Duniya

Facebook Auto Publish Powered By : XYZScripts.com