ಐಟಂ ಸಾಂಗಿಗೆ ಹೆಜ್ಜೆ ಹಾಕಿದ ಬೇಬಿ ಡಾಲ್ ನಿವೇದಿತಾ – ವಿಡಿಯೋ ನೋಡಿ

ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಬೇಬಿ ಡಾಲ್ ನಿವೇದಿತಾ ಗೌಡ ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಡಬ್ ಸ್ಮ್ಯಾಶ್ ಮೂಲಕ ಖ್ಯಾತಿ ಗಳಿಸಿಕೊಂಡಿದ್ದ ನಿವೇದಿತಾ ಬಿಗ್ ಬಾಸ್ ಮನೆಯ ಮೂಲಕ ಮನೆ ಮಾತಾಗಿಬಿಟ್ಟಿದ್ದಾರೆ.

ಇಂತಿಪ್ಪ ಮುದ್ದು ಮುಖದ ಸುಂದರಿ ನಿವೇದಿಗಾ ಗೌಡ ಅವರ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಸೂಪರ್ ಹಿಟ್ ಐಟಂ ಹಾಡಿಗೆ ನಿವೇದಿತಾ ಗೌಡ ಹೆಜ್ಜೆ ಹಾಕಿರುವ ವಿಡಿಯೋ ಫೇಸ್ ಬುಕ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಬಾಲಿವುಡ್ ನಟಿ ಕತ್ರಿನಾ ಕೈಫ್ ಸ್ಟೆಪ್ ಹಾಕಿದ್ದ ‘ಚಿಕ್ನಿ ಚಮೇಲಿ’ ಹಾಡಿಗೆ ನಿವೇದಿತಾ ಗೌಡ ಡ್ಯಾನ್ಸ್ ಮಾಡಿದ ವಿಡಿಯೋ ಇದೀಗ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ಕತ್ರಿನಾ ತೊಟ್ಟಿದ್ದ ಕಾಸ್ಟ್ಯೂಮ್ ನಂತಹುದ್ದೇ ಡ್ರೆಸ್ ನಿವೇದಿತಾ ಮಾಡಿರುವುದು ಈ ವಿಡಿಯೋದ ವಿಶೇಷ.

ಸುಮಾರು ನಾಲ್ಕು ನಿಮಿಷದ ಐಟಂ ಹಾಡಿಗೆ ನಿವೇದಿತಾ ಗೌಡ ಹೆಜ್ಜೆ ಹಾಕಿದ್ದು ವೀಕ್ಷಕರಿಗೆ ಅಚ್ಚರಿ ಉಂಟುಮಾಡಿದೆ. ಬಿಗ್ ಬಾಸ್ ಮನೆಯಲ್ಲಿ ಮೆಲ್ಲಗೆ ಕುಣಿಯುತ್ತಿದ್ದ ನಿವೇದಿತಾ ಗೆ ಐಟಂ ಸಾಂಗ್ ಗೆ ಹೆಜ್ಜೆ ಹಾಕುವಷ್ಟು ಶಕ್ತಿ ಅದೆಲ್ಲಿತ್ತೋ ಎಂಬ ಪ್ರಶ್ನೆ ನಿವೇದಿತಾ ಅಭಿಮಾನಿಗಳಿಗೆ ಮೂಡಿದೆ.

 

Facebook Auto Publish Powered By : XYZScripts.com