ಏನಿತ್ತು, ಏನಿಲ್ಲ ? ; ಕನ್ನಡ ಚಿತ್ರರಂಗ ಹಿಂದೆಂದೂ ಕಾಣದ ವಿಶಿಷ್ಟ ವಿವಾಹ

 
ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಯಶಸ್ಸಿನ ಹಾದಿಯಲ್ಲಿ ದಾಪುಗಾಲು ಹಾಕುತ್ತಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ವಿವಾಹ ಒಕ್ಕಲಿಗ ಹಾಗೂ ಗೌಡ ಸಾರಸ್ವತ ಬ್ರಾಹ್ಮಣ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಿತು.
ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ತಾಜ್ ವೆಸ್ಟ್ ಎಂಡ್ ನೊಳಗೆ ಸಜ್ಜುಗೊಂಡು ಪ್ರಕೃತಿ ಸೊಬಗಿನ ಸೆಟ್ ನಲ್ಲಿ, 12 ಗಂಟೆಗೆ ಅಭಿಜಿನ್ ಮುಹೂರ್ತ ಈ ಜೋಡಿ ಹಸಮಣೆ ಏರಿದರು
ಬಣ್ಣದ ಅಲಂಕಾರಕ್ಕಿಂತಲೂ ಹಸಿರು ಹೊದಿಕೆಯ ಐಸಿರಿಯ ಸೊಬಗು, ಸೊಗಸಿಗೆ ಈ ಪಂಚತಾರಾ ಹೊಟೇಲ್ ನ ಮದುವೆ ಅಂಗಳ ಸಾಕ್ಷಿಯಾಯಿತು.
ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿ ಎಂದೇ ಹೆಸರಾಗಿರುವ ಯಶ್ ಹಾಗೂ ಕೊಂಕಣಿ ಬೆಡಗಿ ರಾಧಿಕಾ ಪಂಡಿತ್ ಕಲ್ಯಾಣೋತ್ಸವದಿಂದಾಗಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟೆಂಡ್ ಹೋಟೆಲ್ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಯಿತು.
ಪಂಚತಾರಾ ಹೊಟೇಲ್ ನ ಅವರಣದಲ್ಲಿ ಹಾಕಲಾದ ಸೋಮನಾಥಪುರ ಸೋಮೇಶ್ವರ ದೇವಾಲಯದ ಅದ್ಧೂರಿ ಸೆಟ್ ನಲ್ಲಿ ಈ ಮದುವೆ ಕೈಂಕರ್ಯ ನೆರವೇರಿತು.
ನಾಳೆ ಮತ್ತು ನಾಡಿದ್ದು ಆರತಕ್ಷತೆ ಏರ್ಪಡಿಸಲಾಗಿದೆ. ನಾಳೆ ಕನ್ನಡ ಚಿತ್ರರಂಗದ ಗಣ್ಯರಿಗೆ, ಆರತಕ್ಷತೆ ಆಯೋಜಿಸಿಲಾಗಿದ್ದು, ಸ್ಯಾಂಡಲ್ ವುಡ್ ಘಟಾನುಘಟಿ ನಟಿಯರ ದಂಡೇ ಇವರಿಬ್ಬರ ರಿಸೆಪ್ಷನ್ ಗೆ ಸಾಕ್ಷಿಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ಯಾಲೆೇಸ್ ಮೈದಾನದ ಸುತ್ತ ಯಶ್, ರಾಧಿಕಾ ಅವರ ಕಟೌಟ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದು, ಈ ಇಬ್ಬರು ನಟ-ನಟಿಯರಿಗೆ ಶುಭಾಶಯ ಹೇಳುತ್ತಿರುವ ಕಟೌಟ್ ಗಳು ಕಂಡುಬರುತ್ತಿವೆ. ಇನ್ನು ಭಾನುವಾರ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಭರ್ಜರಿ ಔತಣಕೂಟ ಆಯೋಜಿಸಲಾಗಿದ್ದು, ರಾಕಿಂಗ್ ಸ್ಟಾರ್ ಆರತಕ್ಷತೆಗೆ ಭರ್ಜರಿ ರಂಗು ಪಡೆದುಕೊಳ್ಳಲಿದೆ. ಈ ಅದ್ಧೂರಿ ರಿಸೆಪ್ಶನ್ ಗಾಗಿ ಬೆಂಗಳೂರು ಅರಮನೆಯ ತ್ರಿಪುರಾವಾಸಿನಿಯಲ್ಲಿ ಬೇಲೂರು, ಹಳೇಬೀಡಿನ ದೇವಾಲಯವನ್ನು ಹೋಲುವ ಅದ್ದೂರಿ ಸೆಟ್ ನಿರ್ಮಿಸಲಾಗುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕ, ನಟ ಅರುಣ್ ಸಾಗರ್ ಸಾರಥ್ಯದಲ್ಲಿ ಈ ಅದ್ದೂರಿ ಸೆಟ್ ನಿರ್ಮಾಣವಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಅದ್ದೂರಿ ಮದುವೆ ಅಭಿಮಾನಿಗಳಿಗೆ ರಸದೌತಣ ಉಣಬಡಿಸುತ್ತಿದೆ…
Courtesy: Balkani News

Facebook Auto Publish Powered By : XYZScripts.com