ಎಸ್ಕೇಪ್ ರಾಣಿ ಪ್ರಗ್ಯಾ ಹಾಟ್ ಲುಕ್!

ನಟಿ ಪ್ರಗ್ಯಾ ನಯನ್ ಅವರು ದರ್ಶನ್ ನಿರ್ದೇಶನದ ಎಸ್ಕೇಪ್ ಸಿನಿಮಾದಲ್ಲಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಗ್ಯಾಗೆ ಈ ಸಿನಿಮಾದಲ್ಲಿ ವಿಭಿನ್ನ ರೀತಿಯ ಪಾತ್ರ ಸಿಕ್ಕಿದೆಯಂತೆ, ಈ ಸಿನಿಮಾ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾ ಹಂದರ ಹೊಂದಿದೆ. ಭಯ ಹುಟ್ಟಿಸುವಂತಹ ಘಟನೆ ನಡೆದಾಗ ಅದರಲ್ಲಿ ಸಿಕ್ಕಿ ಹಾಕಿಕೊಂಡವರು ಹೇಗೆಲ್ಲ ಎಸ್ಕೇಪ್ ಆಗುತ್ತಾರೆ ಅನ್ನವುದೇ ಸಿನಿಮಾ.

ಸಿನಿಮಾದ ಕುರಿತು ಪ್ರತಿಕ್ರಿಯಿಸಿರುವ ಪ್ರಗ್ಯಾ, ನನ್ನದು ಹೊಸ ರೀತಿಯ ಪಾತ್ರ. ನಾನು ಘಟನೆಯಿಂದ ಹೇಗೆ ಎಸ್ಕೇಪ್ ಆಗುತ್ತೇನೆ ಅನ್ನುವ ಅಂಶವೂ ಸಿನಿಮಾದಲ್ಲಿ ಪ್ರಮುಖವಾದದ್ದು, ಹಾಗಾಗಿ ಪಾತ್ರದ ಬಗ್ಗೆ ಏನೂ ಹೇಳಲಾರೆ ಎಂದಿದ್ದಾರೆ.

ದರ್ಶನ್ ಕತೆ, ಚಿತ್ರಕತೆ, ನಿರ್ದೇಶನ ಮಾಡಿದ್ದು, ಸಾಯಿಕಿರಣ್ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿ ಬಂದಿದ್ದು, ದೀಪಮ್ ಕೊಯ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಭರತ್, ರಘು ಪಾಂಡೇಶ್ವರ್, ಹೇಮಂತ್ ಮುಂತಾದವರ ತಾರಗಣ ಈ ಚಿತ್ರಕ್ಕಿದೆ.

Courtesy: Kannada News Now

Facebook Auto Publish Powered By : XYZScripts.com