ಎಲ್.ಟಿ.ಟಿ ವೆಬ್ ರಿಲೀಸ್ ನಲ್ಲಿ ದಕ್ಷಿಣ ಭಾರತದ ಪ್ರಮುಖ ನಟರು?… ಇಲ್ಲಿ ಓದಿ

‘ಸೈನೆಡ್’, ‘ಗೇಮ್’, ‘ಅಟ್ಟಹಾಸ’ ಹೀಗೆ ವಿಶಿಷ್ಟ ರೀತಿಯ ನೈಜಘಟನೆಗೆ ಸಿನಿಮಾ ರೂಪ ಕೊಟ್ಟು ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ತೆರೆ ಮೇಲೆ ತರುವ ನಿರ್ದೇಶಕ ಎ ಎಂ ಆರ್ ರಮೇಶ್. ನೈಜ ಘಟನೆಗಳನ್ನ ತೆರೆ ಮೇಲೆ ತರುವ ಪ್ರಯತ್ನ ಸುಲಭವಲ್ಲ ಅದಕ್ಕಾಗಿ ಸಾಕಷ್ಟು ಕಷ್ಟ ಪಡಬೇಕು. ಅದರಂತೆ ಎ ಎಂ ಆರ್ ರಮೇಶ್ ಕೂಡ ಸಿನಿಮಾದ ಸ್ಲ್ರೀಪ್ಟ್ ವರ್ಕ್ ನಲ್ಲಿ ಬ್ಯುಸಿ ಆದರೆ. ಚಿತ್ರಕ್ಕೆ ಬೇಕಾದ ನಾಯಕ ಹಾಗೂ ಮಾಹಿತಿಗಾಗಿ ಇನ್ನು ಸಮಯ ಬೇಕಾಗುತ್ತದೆ ಎಂದು ತಿಳಿದ ಕೂಡಲೇ ರಮೇಶ್ ಮತ್ತೊಂದು ಸ್ಪೋಟಕ ವಿಚಾರವನ್ನ ತೆರೆಗೆ ತರೋ ಪ್ರಯತ್ನವನ್ನ ಸದ್ದಿಲ್ಲದೆ ಮಾಡಿದ್ದಾರೆ.

ಸಾಕಷ್ಟು ತಿಂಗಳಿಂದ ರಮೇಶ್ ವಿದೇಶಗಳನ್ನ ಸುತ್ತಾಡುತ್ತಾ ಕಥೆಯನ್ನ ಸಿದ್ದ ಪಡೆಸಿಕೊಳ್ಳುತ್ತಿದ್ದಾರೆ. ಸೈನೆಡ್ ನಿರ್ದೇಶಕರು ಈ ಬಾರಿ ‘ಎಲ್ ಟಿ ಟಿ’ ಪ್ರಭಾಕರನ್ ಅವರ ಸ್ಟೋರಿ ಹೇಳಲಿದ್ದಾರೆ. ಅದು ಸಿನಿಮಾ ಮೂಲಕವಲ್ಲ. ವೆಬ್ ಸೀರಿಸ್ ಮೂಲಕ ಸ್ಪೆಷಲ್ ಅಂದರೆ ಸೌತ್ ಇಂಡಿಯಾದ ಬಿಗ್ ಸ್ಟಾರ್ ಗಳು ಈ ವೆಬ್ ಸೀರಿಸ್ ನಲ್ಲಿ ಅಭಿನಯ ಮಾಡುತ್ತಿದ್ದಾರೆ.

‘ಎಲ್ ಟಿ ಟಿ’ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ದೇಶಕರು ಇದಕ್ಕಾಗಿ ಸೌತ್ ನ ಬಿಗ್ ಸ್ಟಾರ್ ಗಳಾದ ವಿಕ್ಟರಿ ವೆಂಕಟೇಶ್ ಹಾಗೂ ರಾಣ ದಗ್ಗುಬಾಟಿ ಅಭಿನಯಿಸುತ್ತಿದ್ದಾರೆ.

Facebook Auto Publish Powered By : XYZScripts.com