ಎರಡು ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ ನೀಲಿ ತಾರೆ ಸನ್ನಿ ಲೆಯೋನಿ

ಬಾಲಿವುಡ್ ನೀಲಿಬೆಡಗಿ ಸನ್ನಿ ಲಿಯೋನ್ ಎರಡು ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ್ದಾರೆ.ಸನ್ನಿ ಲಿಯೋನ್ ಹಾಗೂ ಆಕೆಯ ಪತಿ ಮೂವರು ಮಕ್ಕಳೊಂದಿಗಿರುವ ಪೋಟೋವೊಂದನ್ನು ಟ್ವೀಟರ್ ನಲ್ಲಿ ಹಾಕಿದ್ದಾರೆ.

ಸನ್ನಿ ಲಿಯೋನ್ ಪತಿ ವೆಬರ್ ಕಳೆದ ವರ್ಷ ಜೂನ್ ನಲ್ಲಿ ನಿಶಾ ಕೌರ್ ಎಂಬ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದರು.ಆದರೆ, ಈ ಪೋಟೋದಲ್ಲಿ ನಿಶಾ ಜೊತೆಗೆ ಸನ್ನಿ ಲಿಯೋನ್ ಹಾಗೂ ಡೇವಿಡ್ ವೆಬರ್ ಎರಡು ಮಕ್ಕಳನ್ನು ಹಿಡಿದು ಕುಳಿತಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಸನ್ನಿ ಲಿಯೋನ್, ತನ್ನ ಪತಿಯ ಆಪೇಕ್ಷೆಯಂತೆ ಮೂವರು ಮಕ್ಕಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಹಲವು ವರ್ಷಗಳ ನಂತರ ತಮ್ಮ ಕುಟುಂಬ ಯೋಜನೆ ಪೂರ್ಣಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಕೆಲ ವಾರದ ಹಿಂದೆ ಈ ಮಕ್ಕಳಿಗೆ ಜನ್ಮ ನೀಡಿದ್ದು,ತಮ್ಮ ಕಣ್ಣು ಮತ್ತು ಮನಸ್ಸೆಲ್ಲಾ ಆ ಮಕ್ಕಳ ಮೇಲೆಯೇ ಇರುವುದಾಗಿ ಅವರು ಹೇಳಿದ್ದಾರೆ.

Facebook Auto Publish Powered By : XYZScripts.com