ಎರಡನೇ ಇನ್ನಿಂಗ್ಸ್ ಆರಂಭಿಸಲಿರುವ ಚೆಲುವಿನ ಚಿತ್ತಾರದ ಬೆಡಗಿ

ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡು, ಕರ್ನಾಟಕ ವಿಧಾನ ಸಭೆ ಚುನಾವಣೆ ಪ್ರಚಾರದಲ್ಲಿ ಅಮೂಲ್ಯ ಇಷ್ಟು ದಿನ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಮಾವ ಜಿ.ಎಚ್.ರಾಮಚಂದ್ರ ರಾಜರಾಜೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಮಾವನನ್ನು ಗೆಲ್ಲಿಸಲು ದಿನಪೂರ್ತಿ ಪ್ರಚಾರದಲ್ಲಿ ತೊಡಗಿದ್ದ ಅಮೂಲ್ಯ, ಇದೀಗ ತುಸು ರಿಲ್ಯಾಕ್ಸ್ ಮೂಡ್‌ನಲ್ಲಿದ್ದು, ಮುಂದಿನ ಸಿನಿ ಭವಿಷ್ಯದ ಬಗ್ಗೆ ಚಿಂತಿಸಲು ಸನ್ನದ್ಧರಾಗುತ್ತಿದ್ದಾರೆ. ಫಿಟ್‌ ಆಗಿರಲು ಜಿಮ್‌ನಲ್ಲಿ ಬೆವರಿಳಿಸಲೂ ಆರಂಭಿಸಿದ್ದಾರಂತೆ.

‘ಮಾಸ್ತಿಗುಡಿ’ ಚಿತ್ರದ ನಂತರ ತೆರೆ ಮರೆಗೆ ಸರಿದಿದ್ದ ಅಮೂಲ್ಯ ಇದೀಗ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದು, ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇದಕ್ಕೆ ಪತಿ ಜಗದೀಶ್ ಫುಲ್ ಸಪೋರ್ಟ್ ಇದ್ದು, ಅವರೂ ಸ್ಕ್ರಿಪ್ಟ್ ಆರಿಸುವುದರಲ್ಲಿ ಭಾಗಿಯಾಗಿದ್ದಾರೆ.

ಪ್ರಶಸ್ತಿ ವಿಜೇತ ಪಾತ್ರವಾದ ಈ ಸ್ಕ್ರಿಪ್ಟ್‌ ಬ್ಯೂಟಿಫುಲ್ ಆಗಿದ್ದು, ಶೀಘ್ರದಲ್ಲಿಯೇ ಕಥೆಯನ್ನು ಫೈನಲೈಸ್ ಮಾಡುತ್ತಾರಂತೆ. ಮದುವೆಯಾದ್ದರಿಂದ ಮಾತ್ರ ಆಯ್ಕೆ ಮಾಡಿಕೊಳ್ಳುವಾಗ ಹೆಚ್ಚು ಪರ್ಟಿಕ್ಯೂಲರ್ ಆಗಿರುವೆ ಎನ್ನುತ್ತಾರೆ ನಟಿ.

ಸದ್ಯಕ್ಕೆ ತುಸು ಬಿಡುವಿರುವುದರಿಂದ ಲಂಡನ್‌ಗೆ ತೆರಳುತ್ತಿದ್ದು, ಬಂದ ಮೇಲೆ ಚಿತ್ರ ಆರಿಸಿಕೊಳ್ಳುವ ವಿಷಯವಾಗಿ ಸೀರಿಯಸ್ ಆಗುತ್ತೇನೆ, ಎನ್ನುತ್ತಾರೆ ಕ್ಯೂಟ್ ನಟಿ ಅಮೂಲ್ಯ.

Facebook Auto Publish Powered By : XYZScripts.com