ಉಪ್ಪು ಹುಳಿ ಖಾರ ಸಿನಿಮಾದ ಹಾಡಿಗೆ ಕಿಚ್ಚನ ಧ್ವನಿ!

ಇಮ್ರಾನ್ ಸರ್ದಾರಿಯಾ ನಿರ್ದೇಶನದ ಉಪ್ಪು ಹುಳಿ ಖಾರ ಚಿತ್ರದ ಹಾಡಿಗೆ ಕಿಚ್ಚ ಸುದೀಪ್ ಅವರು ಧ್ವನಿಯಾಗಿದ್ದಾರೆ.

ಬುಧವಾರ ರಾತ್ರಿ ಉಪ್ಪು ಹುಳಿ ಖಾರ ಚಿತ್ರದ ಹಾಡಿಗೆ ಸುದೀಪ್ ಧ್ವನಿಯಾಗಿದ್ದಾರೆ, ಜೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನದಲ್ಲಿ ಈ ಹಾಡನ್ನು ರೆಕಾರ್ಡ್ ಮಾಡಲಾಗಿದೆ. ಈಗಾಗಲೇ ಉಪ್ಪು ಹುಳಿಖಾರ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ಇನ್ನೊಂದು ಹಾಡನ್ನು ಚಿತ್ರೀಕರಿಸಿದರೆ ಚಿತ್ರ ಪೂರ್ಣಗೊಳ್ಳಲಿದೆ.

ರಮೇಶ್ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಮಾಲಾಶ್ರೀ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಉಳಿದಂತೆ ಅನುಶ್ರೀ, ಧನು, ಶಶಿ, ಶರತ್, ಜಯಶ್ರೀ ನಟಿಸಿದ್ದಾರೆ, ಈ ಚಿತ್ರದ ಒಂದು ವಿಶೇಷ ಗೀತೆಗೆ ರಾಗಿಣಿ ಸಖತ್ ಸ್ಟೆಪ್ಸ್ ಮೂಲಕ ಮಿಂಚಿದ್ದಾರೆ.

Courtesy: Kannada News Now

Facebook Auto Publish Powered By : XYZScripts.com