ಉಪ್ಪಿ ಫ್ಯಾಮಿಲಿಯಿಂದ ಸ್ಯಾಂಡಲ್ ವುಡ್ ಗೆ ಮತ್ತೋರ್ವ ಹೀರೋ ಎಂಟ್ರಿ..!

ಸಿನಿಮಾ ಡೆಸ್ಕ್ :ರಿಯಲ್ ಸ್ಟಾರ್ ಉಪೇಂದ್ರ’ಎ’ ಸಿನಿಮಾದಿಂದ ಹಿಡಿದು ಇದುವರೆಗಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ರಿಯಲ್ ಸ್ಟಾರ್ ನಟನಾಗಿ ಮಿಂಚಿ ಸ್ಯಾಂಡಲ್ ವುಡ್ ನಲ್ಲಿ ಸೈ ಎನಿಸಿಕೊಂಡರು. ಅಂತೆಯೇ ಉಪ್ಪಿ ಪತ್ನಿ ಪ್ರಿಯಾಂಕಾ ಕೂಡ ನಾನೇನು ಕಮ್ಮಿ ಎಂದು ಹಲವು ಸ್ಟಾರ್ ನಟರ ಜೊತೆ ನಟಿಸಿ ಸ್ಯಾಂಡಲ್ ವುಡ ಅಂಗಳದಲ್ಲಿ ಸಖತ್ ಕಮಾಲ್ ಮಾಡಿದರು.

ಸದ್ಯ ಇದೀಗ ಉಪೇಂದ್ರ ಅವರ ಫ್ಯಾಮಿಲಿಯಿಂದ ಮತ್ತೊಬ್ಬರು ಸ್ಯಾಂಡಲ್ ವುಡ್ ಗೆ ನಾಯಕನಾಗಿ ಗೆ ಪಾದಾರ್ಪಣೆ ಮಾಡಲಿದ್ದಾರೆ. ಯೆಸ್..ಅದ್ಯಾರು ಅಂತ ಯೋಚಿಸ್ತಿದ್ದೀರಾ.ಹೌದು ಉಪೇಂದ್ರ ಅವರ ಅಣ್ಣ ಸುದೀಂದ್ರ ಅವರ ಮಗ ನಿರಂಜನ್ ಸುದೀಂದ್ರ ಹೊಸ ಸಿನಿಮಾವೊಂದರಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿಕ್ಕಂದಿನಿಂದಲೂ ಚಿಕ್ಕಪ್ಪನ ಸಿನಿಮಾ ನೋಡ್ತಾ ಬೆಳೆದವನು ನಾನು. ಅವರೇ ನನಗೆ ಸ್ಪೂರ್ತಿ ಎಂದು ನಿರಂಜನ್ ಹೇಳಿದ್ದಾರೆ. ಈಗಾಗಲೇ ಎರಡು ಸಿನಿಮಾದಲ್ಲಿ ಬಾಲ ನಟನಾಗಿ ನಟಿಸಿದ್ದಾರೆ ನಿರಂಜನ್. ವಿಷ್ನುವರ್ಧನ್ ಅವರ ಬಳ್ಖಾರಿ ನಾಗ ಸಿನಿಮಾದಲ್ಲಿಯೂ ಕೂಡ ವಿಷ್ಣುವರ್ಧನ್ ಬಾಲ್ಯದ ಪಾತ್ರವನ್ನು ನಿರ್ವಹಿಸಿದ್ದಾರಂತೆ.

ಉಪ್ಪಿ 2 ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ನಿರಂಜನ್ ಇದೀಗ ಹೊಸ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಆದರೆ ಸಿನಿಮಾಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಒಟ್ನಲ್ಲಿ ತೆರೆಮೇಲೆ ನಿರಂಜನ್ ಯಾವ ಮಟ್ಟಿಗೆ ಹವಾ ಮಾಡ್ತಾರೆ ಎಂಬುದು ಸದ್ಯಕ್ಕಿರುವ ಕುತೂಹಲ.

Courtesy: Kannada News Now

Facebook Auto Publish Powered By : XYZScripts.com