ಉಪೇಂದ್ರ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸೋದು ಡೌಟ್, ಯಾಕೆ?.. ಇಲ್ಲಿ ಓದಿ

ನಟ ಉಪೇಂದ್ರ ಕೊನೆಗೂ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷದಿಂದ ಹೊರಬಂದಿದ್ದಾರೆ. ರೆಸಾರ್ಟ್ ನಲ್ಲಿ ಸಭೆ ನಡೆಸಿದ ಉಪ್ಪಿ, ಕೆಪಿಜೆಪಿಯಿಂದ ಹೊರಬರುವ ತಮ್ಮ ನಿರ್ಧಾರವನ್ನು ಘೋಷಣೆ ಮಾಡಿದ್ರು.

ಆದ್ರೆ ತಮ್ಮ ಕನಸಿನ ಪ್ರಜಾಕೀಯ ಸಿದ್ಧಾಂತವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಅಂತಾ ಹೇಳಿದ್ದಾರೆ. ಅಷ್ಟೇ ಅಲ್ಲ ಚುನಾವಣೆಯಲ್ಲಿ ಸ್ಪರ್ಧಿಸೋದಾಗಿ ತಿಳಿಸಿದ್ದಾರೆ. ವಕೀಲರೊಂದಿಗೆ ಚರ್ಚಿಸಿ ಚಿಹ್ನೆಗಾಗಿ ಸಹ ನೋಂದಣಿ ಮಾಡಲಿದ್ದಾರಂತೆ. ಆದ್ರೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಉಪೇಂದ್ರ ಸ್ಪರ್ಧಿಸುವುದು ಅನುಮಾನವಾಗಿದೆ.

ಲೋಕಸಭಾ ಎಲೆಕ್ಷನ್ ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ತನಗೆ ಅನ್ಯಾಯವಾಗಿದೆ, ಜೊತೆಗೆ ರಾಜಕೀಯದ ಬಗ್ಗೆ ಅನುಭವವಾಗಿದೆ ಎಂದಿರೋ ಉಪೇಂದ್ರ, ಮೋಸ ಮಾಡುವವರನ್ನು ದೇವರು ನೋಡಿಕೊಳ್ತಾನೆ ಅಂತಾ ಮಾರ್ಮಿಕವಾಗಿ ನುಡಿದ್ರು. ಇದೆಲ್ಲಾ ದೈವ ನಿರ್ಣಯ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

Facebook Auto Publish Powered By : XYZScripts.com