ಉದಯ್ ಮತ್ತು ಅನಿಲ್ ಸಾವಿಗೆ ಕಾರಣವಾಯ್ತಾ ಮೀನಿನ ಬಲೆ?

ಈ ರೀತಿಯ ಅನುಮಾನವೊಂದು ಕನ್ನಡ ಸಿನಿ ಅಡ್ಡಾದಲ್ಲಿ ಕೇಳಿಬರುತ್ತಿದೆ. ನವೆಂಬರ್ 7ರಂದು ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಶೂಟಿಂಗ್ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನಡೀತಿತ್ತು. ಅದೊಂದು ನಿಜಕ್ಕೂ ಸಾವಿನ ಜಿಗಿತವೇ ಆಗಿತ್ತು. ಚಿತ್ರತಂಡ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಅನ್ನೋದು ಮೇಲ್ಮೋಟಕ್ಕೆ ಗೊತ್ತಾಗುತ್ತದಾದರೂ, ಅವರಿಬ್ಬರನ್ನು ಬಲಿತೆಗೆದುಕೊಂಡಿದ್ದು ಮೀನಿನ ಬಲೆ ಅನ್ನೋ ಮಾತುಗಳು ಈಗ ಕೇಳಿಬರುತ್ತಿವೆ.
ಅನಿಲ್ ಮತ್ತು ರಾಘವ ಉದಯ್ ಹೆಲಿಕಾಪ್ಟರ್‌ನಿಂದ ಧುಮುಕಿದ ಜಾಗದಲ್ಲಿ ಯಾವಾಗಲೋ ನೀರಿನಲ್ಲೇ ಉಳಿದುಕೊಂಡಿದ್ದ ಮೀನಿನ ಬಲೆಗಳು ಕಾರಣವಾಗಿರಲೂ ಬಹುದು. ನೀರಿಗೆ ಬಿದ್ದ ತಕ್ಷಣ ಅವರು ಸ್ವಲ್ಪ ದೂರ ಈಜಿದರು. ಹೆಲಿಕಾಪ್ಟರ್‌ನಿಂದ ಧುಮುಕಿದ ಮೂವರಲ್ಲಿ ಸಾವು ಗೆದ್ದು ಬಂದದ್ದು ಮಾತ್ರ ದುನಿಯಾ ವಿಜಯ್.
ಅವರೇನೋ ಲೈಫ್ ಜಾಕೆಟ್ ಧರಿಸಿದ್ದರು. ಆದರೆ ಇವರಿಗೆ ಬೇರ್ ಬಾಡಿಯಲ್ಲಿ ನೀರಿಗೆ ಧುಮುಕಿದ್ದರು. ಈಜುವಾಗ ಬಹುಶಃ ಅವರ ಕಾಲುಗಳಿಗೆ ಮೀನಿನ ಬಲೆ ಸಿಕ್ಕಿಬಿದ್ದಿರಬೇಕು. ಮುಂದಕ್ಕೆ ಈಜಲಾಗದೆ, ಅದು ಇನ್ನಷ್ಟು ಕಾಲಿಗೆ ಸುತ್ತಿಕೊಂಡು ಮುಳುಗಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಅದು ಏನೇ ಇರಲಿ ಚಿತ್ರತಂಡದ ನಿರ್ಲಕ್ಷ್ಯವಂತೂ ಎದ್ದು ಕಾಣುತ್ತಿತ್ತು. ಒಂದು ವೇಳೆ ಮೀನಿನ ಬಲೆಗೆ ಅವರ ಕಾಲುಗಳು ಸಿಕ್ಕಿಬಿದ್ದಿದ್ದರೂ ಸರಿಯಾದ ಸಮಯಕ್ಕೆ ಜೀವ ಉಳಿಸಬೇಕಿದ್ದ ಬೋಟ್ ಅಲ್ಲಿಗೆ ತೆರಳಿದ್ದರೆ ಅವರ ಜೀವ ಉಳಿಸಬಹುದಿತ್ತು. ಅವರಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಯಾವುದು ಸತ್ಯವೋ ಯಾವುದು ಮಿಥ್ಯವೋ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕು.
Courtesy: Balkani News

Facebook Auto Publish Powered By : XYZScripts.com