‘ಉತ್ತಮ ಪ್ರಜಾ ಪಾರ್ಟಿ’ (UPP) ಹೆಸರಿನಲ್ಲಿದೆ ಒಂದು ಇಂಟರೆಸ್ಟಿಂಗ್ ಕಥೆ

ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಹೆಸರು ‘ಉತ್ತಮ ಪ್ರಜಾ ಪಾರ್ಟಿ’ ಎಂದು ಹೇಳಲಾಗ್ತಿದೆ. ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿ ಎಂಬ ತತ್ವ-ಆದರ್ಶಗಳನ್ನ ಒಳಗೊಂಡ ಪಾರ್ಟಿಯೇ ಈ ‘ಉತ್ತಮ ಪ್ರಜಾ ಪಾರ್ಟಿ’. ಈ ಹೆಸರಿಗೆ ಸಂಬಂಧಿಸಿದಂತೆ ಒಂದು ಇಂಟರೆಸ್ಟಿಂಗ್ ಕಥೆ ಇದೆ.

ಉಪೇಂದ್ರ ಅವರು ತುಂಬಾ ಯೋಚನೆ ಮಾಡಿ ಈ ಪಕ್ಷದ ಹೆಸರು ಇಟ್ಟಿರುತ್ತಾರೆ. ಅದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಉಪೇಂದ್ರ ಅಭಿಮಾನಿಗಳು ಈ ಹೆಸರಿಗೆ ಒಂದೊಂದು ಒಳ ಅರ್ಥ ಹುಡುಕಿಕೊಂಡಿರುತ್ತಾರೆ. ಇಲ್ಲೊಬ್ಬ ಅಭಿಮಾನಿ ‘ಉತ್ತಮ ಪ್ರಜಾ ಪಾರ್ಟಿ’ ಹೆಸರಿಗೂ ಮತ್ತು ಉಪೇಂದ್ರ ಅವರ ಹೆಸರಿಗೂ ಹೇಗೆ ಸಂಬಂಧ ಕಲ್ಪಿಸಿದ್ದಾರೆ ನೋಡಿ….

ಭಾರತೀಯ ಜನತಾ ಪಾರ್ಟಿ ಅಂದ್ರೆ ‘BJP’, ಜಾತ್ಯತೀತ ಜನತಾದಳ ಅಂದ್ರೆ ‘JDS’, ಅದೇ ತರ ಉಪೇಂದ್ರ ಅವರ ಉತ್ತಮ ಪ್ರಜಾ ಪಾರ್ಟಿ ಅಂದ್ರೆ ‘UPP’…….

‘UPP’ (ಉತ್ತಮ ಪ್ರಜಾ ಪಾರ್ಟಿ) ಮತ್ತು ‘UPPI’ಗೂ (ಉಪ್ಪಿ) ಸಂಬಂಧವಿದೆ. UPPI ಯಲ್ಲಿ ‘I’ ತೆಗೆದುಬಿಟ್ಟರೇ ಅದು ‘UPP’ (ಉತ್ತಮ ಪ್ರಜಾ ಪಾರ್ಟಿ) ಆಗುತ್ತೆ. ಹೀಗಾಗಿ, ಇದು ಉಪ್ಪಿ ಹೆಸರಿನಿಂದಲೇ ಸ್ಥಾಪಿತವಾಗಿರುವ ಪಕ್ಷ. ಇಲ್ಲಿ ‘I’ ಅಂದ್ರೆ ‘ಅಹಂ’ ಎಂದರ್ಥ. ‘ಅಹಂ’ ಎನ್ನುವುದನ್ನ ಬಿಟ್ಟು ಉಪ್ಪಿ ಪಕ್ಷ ಕೆಲಸ ಮಾಡಲಿದೆ ಎಂಬುದು ಈ ಅಭಿಮಾನಿಯ ಕಲ್ಪನೆ.

ಅದಕ್ಕೆ ಹೇಳುವುದು ಉಪೇಂದ್ರ ಅವರ ಅಭಿಮಾನಿಗಳು ಎಲ್ಲರಂತೆ ಅಲ್ಲ, ಅವರು ಕೂಡ ರಿಯಲ್ ಸ್ಟಾರ್ ಸ್ಟೈಲ್ ನಲ್ಲೇ ಯೋಚನೆ ಮಾಡ್ತಾರೆ ಎನ್ನುವುದು.

source: filmibeat.com

Facebook Auto Publish Powered By : XYZScripts.com