ಈ ವರ್ಷವಿಡೀ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹಬ್ಬ.. ಯಾಕೆ ಗೊತ್ತಾ?

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸುದೀಪ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಈಗಲೇ ತಯಾರಾಗಿಬಿಡಿ. ‘ ರಾಜು-ಕನ್ನಡ ಮಿಡಿಯಮ್’ ಚಿತ್ರದ ಮೂಲಕ ಸುದೀಪ್ ಈ ವರ್ಷಾರಂಭವನ್ನು ಆಚರಿಸಿದ್ದರು. ಈಗ ಪೂರ್ಣ ಪ್ರಮಾಣದ ನಾಯಕತ್ವದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿವೆ. ಈ ಮೂಲಕ ಈ ವರ್ಷ ಪೂರ್ತಿ ಅವರ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ.

ಮೊದಲಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ ಜೊತೆಗಿನ ‘ ದಿ ವಿಲನ್’ ಚಿತ್ರ ತೆರೆ ಕಾಣುವುದಿಕ್ಕೆ ಸಿದ್ದಗೊಳ್ಳುತ್ತಿದೆ. ಇನ್ನು ‘ಕೋಟಿಗೊಬ್ಬ-3’ ಚಿತ್ರದ ಆರಂಭಕ್ಕೂ ಮೊದಲೇ, ಡಿಸೆಂಬರ್ 25 ಕ್ಕೆ ಬಿಡುಗಡೆಗೆ ಎಂದು ಹೇಳಿಬಿಟ್ಟಿದೆ ಚಿತ್ರತಂಡ. ಇದರೊಂದಿಗೆ ಹೆಬ್ಬುಲಿ ಚಿತ್ರದ ನಿರ್ದೇಶಕ ಕೃಷ್ಣ ಕಾಂಭಿನೇಷನ್ನಿನ ‘ಪೈಲ್ವಾನ್;’ ಚಿತ್ರ ಸಹ ಇದೇ ವರ್ಷ ಬಿಡುಗಡೆಯಾಗಲಿದೆ. ಪೈಲ್ವಾನ್ ಹಾಗೂ ಬಾಕ್ಸರ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಸುದೀಪ್ ಭರ್ಜರಿ ತಯಾರಿ ನಡೆಸಿದ್ದಾರೆ.

ಇನ್ನು ತಮಿಳಿನಲ್ಲಿ ಧನುಷ್ ಜೊತೆಗೆ ಹಾಗೂ ಹಾಲಿವುಡ್ ಚಿತ್ರದಲ್ಲೂ ಸುದೀಪ್ ಕಾಣಸಿಕೊಳ್ಳುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಈ ವರ್ಷ ಭರ್ಜರಿ ಗಿಪ್ಟ್ ನೀಡುತ್ತಿದ್ದಾರೆ ಸುದೀಪ್.

Facebook Auto Publish Powered By : XYZScripts.com