ಈ ಬಾರಿಯ ವೀಕೆಂಡ್ ಟೆಂಟ್ ನಲ್ಲಿ ಗೆಸ್ಟ್ ಯಾರು ಗೊತ್ತಾ..ಕೇಳಿದ್ರೆ ಅಚ್ಚರಿಯಾಗ್ತೀರಾ..!

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯ ಕ್ರಮ ‘ವೀಕೆಂಡ್ ವಿತ್ ರಮೇಶ್ ‘ಪ್ರೇಕ್ಷಕರನ್ನು ಬಹಳ ಸೆಳೆದಿದೆ. ಪ್ರತಿ ವಾರವೂ ಕೂಡ ಒಬ್ಬರು ಸಾಧಕರ ಸೀಟಿನಲ್ಲಿ ಆಸೀನರಾಗ್ತಾರೆ. ಮೊನ್ನೆ ನಡೆದ ಎಪಿಸೋಡ್ ನಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಆಸೀನರಾಗಿದ್ದರು. ಆದರೆ ಈ ವಾರ ವೀಕ್ಷಕರಿಗೆ ಅಚ್ಚರಿ ಎನಿಸುವಂತಹ ಸಾಧಕರೊಬ್ಬರು ವೀಕೆಂಡ್ ಟೆಂಟ್ ಗೆ ಬರಲಿದ್ದಾರೆ.ಹೌದು, ಬರೀ ಸಿನಿಮಾ ರಂಗದವರನ್ನೇ ಕರೆಸುತ್ತಾರೆ ಎಂಬ ಅಪವಾದ ಕೇಳಿ ಬಂದಿತ್ತು. ಈ ಅಪವಾದವನ್ನು ತೊಡೆಯಲು ಜೀ ವಾಹಿನಿ ನಿರ್ಧರಿಸಿದ್ದು, ದಿಟ್ಟ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಈ ವಾರ ವೀಕೆಂಡ್ ವಿತ್ ಟೆಂಟ್ ಗೆ ಬರಲಿದ್ದಾರೆ.

ರವಿ ಡಿ ಚನ್ನಣ್ಣನವರ್ ಅವರು ಇಂತಹ ದೊಡ್ಡ ಸ್ಥಾನ ತಲುಪುವದಕ್ಕಿಂತ ಮೊದಲು ದಿನಗೂಲಿ, ಹೋಟೆಲ್ ಮಾಣಿ, ಸ್ವೀಪರ್ ಮತ್ತಿರತರ ಕೆಲಸಗಳನ್ನುಮಾಡಿ ಕಷ್ಷಪಟ್ಟು ಬಂದವರು.

ಧಾರವಾಡದ ಹೋಡೆಲ್ ಒಂದರಲ್ಲಿ ಲಿಕ್ಕರ್ ಪೂರೈಕೆ ಮಾಡುವ ಕೆಲ್ಸ ಮಾಡಿಕೊಂಡಿದ್ದ ವ್ಯಕ್ತಿ ನಂತರ ಅದೇ ಧಾರವಾಡದ ಪೊಲೀಸ್ ಅಧಿಕಾರಿಯಾಗಿ ಹೋಗಿದ್ದರು. ಇಂತಹ ಅಪರೂಪದ ಸಾಧಕ ವೀಕೆಂಡ್ ವಿತ್ ಟೆಂಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Courtesy: Kannada News Now

Facebook Auto Publish Powered By : XYZScripts.com