ಇನ್ಮುಂದೆ ಐಟಂ ಸಾಂಗ್ ಮಾಡಲ್ವಂತೆ ಮಗಧೀರನ ರಾಣಿ

ಸ್ಟಾರ್ ಹೀರೋಯಿನ್ಸ್ ಐಟಂ ಸಾಂಗ್ಸ್‌ಗೆ ಹೆಜ್ಜೆ ಹಾಕಿ ಲಕ್ಷಲಕ್ಷ ಎಣಿಸ್ತಿದ್ರೆ ಕಾಜಲ್ ಅಗಲ್‌ವಾಲ್ ಮಾತ್ರ ಆ ಪ್ರಯತ್ನ ಮಾಡಿರ‍್ಲಿಲ್ಲ. ಊರಿಗ್ ಬಂದೋರ್, ನೀರಿಗ್ ಬರ‍್ದೆ ಇರ್ತಾರಾ…? ಅನ್ನೋ ಹಂಗೆ ಜನತಾ ಗ್ಯಾರೇಜ್ ಸಿನಿಮಾದಲ್ಲಿ ಈ ನಿಯಯ ಮೀರಿದ್ಲು ಈ ಮಿತ್ರವಿಂದಾ. ಪಡ್ಡೆಗಳ ಎದೆಯಲ್ಲಿ ಕಿಚ್ಚು ಹಚ್ಚವಂತೆ ಕುಣಿದು ಸಿನಿಮಾ ಸಕ್ಸಸ್‌ನಲ್ಲಿ ಶೇರ್ ಪಡ್ಕೊಂಡ ಈ ಮದನಾರಿ ಇನ್ಮೇಲೆ ಐಟಂ ಸಾಂಗ್ ನಾ ಮಾಡೊದಿಲ್ಲಪ್ಪಾ ಅಂತಿದ್ದಾಳೆ.
ಬೊಂಬಾಟ್ ಮ್ಯೂಸಿಕ್‌ನ ಬಿಂದಾಸ್ ಹಾಡಿಗೆ ‘ನಾ ಪಕ್ಕಾ ಲೋಕಲ್’ ಅಂತ ಸೊಂಟ ಬಳುಕಿಸಿದ ಕಾಜಲ್ ಇದೇ ಫಸ್ಟ್, ಇದೇ ಲಾಸ್ಟ್ ಇನ್ಮೇಲೆ ನೋ ಐಟಂ ಸಾಂಗ್ ಅಂತಿರೋದು ಕೇಳಿ ಅವಳ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಎನ್‌ಟಿಆರ್ ಜೊತೆಗಿನ ಸ್ನೇಹಕ್ಕೋಸ್ಕರ ಈ ಹಾಡಿಗೆ ಒಪ್ಪಿಕೊಂಡೆ ಅನ್ನೋ ಚೆಲುವೆ ಬರೀ ಈ ಹಾಡಿಗೆ 50 ಲಕ್ಷದವರೆಗೂ ಸಂಭಾವನೆ ಎಣಿಸಿದ್ದಾಳೆ ಅನ್ನೋ ಮಾತೂ ಇದೆ.
ಸಕ್ಸಸ್ ಇಲ್ದೆ ಹೊಸ ಆಫರ್ ಇಲ್ದೆ ಕಾಜಲ್ ಅಗರ್‌ವಾಲ್ ಈ ಹಾಡನ್ನ ಒಪ್ಪಿಕೊಂಡ್ಳು ಅನ್ನೋರು ಇದ್ದಾರೆ. ಈ ಡ್ಯಾನ್ಸ್ ನಂಬರ್ ಹಿಟ್ ಆಗಿದ್ದೇ ಆಗಿದ್ದು ಈಕೆಯ ಡಿಮ್ಯಾಂಡ್ ಹೆಚ್ಚಾಗಿದೆಯಂತೆ. ಸದ್ಯ ಖೈದಿ ನಂಬರ್ 150, ರಾಣಾ ದಗ್ಗುಬಾಟಿ ಅಭಿನಯದ ಸಿನಿಮಾಗಳಿಗೆ ಸೈನ್ ಮಾಡಿರೋ ಕಾಜಲ್ ಮತ್ತಷ್ಟು ಅವಕಾಶಗಳ ನಿರೀಕ್ಷೆಯಲ್ಲಿದ್ದಾಳೆ.
ಶೇಖರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಎನ್‌ಟಿಆರ್ ಜೊತೆ ಜನಾತಾ ಗ್ಯಾರೇಜ್‌ನಲ್ಲಿ ಕಾಜಲ್ ಹೆಜ್ಜೆ ಹಾಕಿದ ಈ ಹಾಡು ಈ ವರ್ಷದ ಟಾಲಿವುಡ್‌ನ ಬೆಸ್ಟ್ ಐಟಂ ಡ್ಯಾನ್ಸ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಐಟಂ ಸಾಂಗ್‌ಗಳಿಗೆ ಬ್ರ್ಯಾಂಡ್ ಆಗ್ಬಿಟ್ರೆ ಹೀರೋಯಿನ್ ಛಾನ್ಸ್ ಸಿಗಲ್ಲ ಅನ್ನೋ ಭಯಕ್ಕೆ ಇನ್ಮೇಲೆ ನೋ ಸ್ಪೆಷಲ್ ನಂಬರ‍್ಸ್ ಅಂತಿದ್ದಾಳೆ ಕಾಜಲ್. ಈ ಮಾತನ್ನೂ ಮುರಿಯೋ ದಿನ ಕೂಡ ಬರ‍್ಬೋದೇನೊ ಗೊತ್ತಿಲ್ಲ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com