ಇನ್ನು ವಿಳಂಬವಾಗಲಿದೆ ಕೆ.ಜಿ ಎಫ್ ಚಿತ್ರದ ಬಿಡುಗಡೆ… ಯಾಕೆ ಎಂದು ನಿರ್ದೇಶಕರೇ ಹೇಳಿದ್ದಾರೆ ಇಲ್ಲಿ ಓದಿ

ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಯಶ್ ಅಭಿನಯಿಸಿರುವ ಕೆಜಿಎಫ್ ಸಿನಿಮಾದ ಶೂಟಿಂಗ್ ಇನ್ನೂ 20 ದಿನ ಬಾಕಿ ಉಳಿದಿದ್ದು, ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಕೆಜಿಎಫ್ ಸಿನಿಮಾಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ, ಮತ್ತಷ್ಟು ತಿಂಗಳ ನಂತರ ಚಿತ್ರ ರಿಲೀಸ್ ಆಗಲಿದೆ, ಆದರೆ ರಿಲೀಸ್ ಯಾವ ಡೇಟ್ ನಲ್ಲಿ ಆಗಲಿದೆ ಎಂಬುದನ್ನು ನಿರ್ದೇಶಕ ಪ್ರಶಾಂತ್ ನೀಲ್ ತಿಳಿಸಿಲ್ಲ,

ಕೆಜಿಎಫ್ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗತ್ತಿದ್ದು, ಚಿತ್ರದ ಪ್ರಮೋಷನ್ ಗೆ ಮತ್ತಷ್ಟು ಸಮಯದ ಅವಶ್ಯಕತೆಯಿದೆ ಎಂದು ಪ್ರಶಾಂತ್ ತಿಳಿಸಿದ್ದಾರೆ, ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಬೇಕೆಂಬ ಅವರಸದಲ್ಲಿದ್ದೆವು, ಆದರೆ ನಾವು ಹಾಕಿಕೊಂಡಿದ್ದ ಡೆಡ್ ಲೈನ್ ತಲುಪಲು ಸಾಧ್ಯವಾಗಿಲ್ಲ, ಭಾರತ ಮತ್ತು ಕರ್ನಾಟಕದ ಎಲ್ಲಾ ಪ್ರೇಕ್ಷಕರನ್ನು ತಲುಪುವಂತೆ ಪ್ರಮೋಷನ್ ಮಾಡಲು ಬಯಸಿರುವುದಾಗಿ ಹೇಳಿದ್ದಾರೆ.

ಕೆಲವರು ಕೆಜಿಎಫ್ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ ಎಂದು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ಸಿನಿಮಾ ಬಿಡುಗಡೆ ದಿನಾಂಕವನ್ನು ಯಶ್ ಗೆ ಬಿಡಲಾಗಿದೆ. ನಿರ್ಮಾಪಕರ ಜೊತೆ ಯಶ್ ಗೆ ಹಲವು ವರ್ಷಗಳ ನಂಟಿದೆ ಎಂದು ತಿಳಿಸಿದ್ದಾರೆ.

ಇನ್ನೂ ಕೆಜಿಎಫ್ ಸಿನಿಮಾದ 2ನೇ ಭಾಗ ಕೂಡ ರಿಲೀಸ್ ಆಗಲಿದ್ದು, ಮೊದಲನೇ ಭಾಗ ನನಗೆ ಸಮಾಧಾನ ತಂದರೆ 2ನೇ ಭಾಗದ ಚಿತ್ರೀಕರಣ ನಡೆಸಲಾಗುವುದು ಎಂದು ವಿವರಿಸಿದ್ದಾರೆ. ಕೆಜಿಎಫ್ ಸಿನಿಮಾಗಾಗಿ ಕಾಯುವುದರಲ್ಲಿ ಅರ್ಥವಿದೆ ಎಂದು ತಿಳಿಸಿದ್ದಾರೆ.

Facebook Auto Publish Powered By : XYZScripts.com