ಇನ್ನಾದ್ರು ಮಂಡ್ಯಾಗೆ ಹೋಗ್ರೀ ರಮ್ಯಾ ಮೇಡಂ

ಈಗಂತೂ ಸಿನಿ ಮಂದಿಗೆ ಹಾಗು ಮಂಡ್ಯ ಜನರಿಗೆ ಅಷ್ಟೇ ಯಾಕೆ ಮಾಧ್ಯವರಿಗೆ ರಮ್ಯಾನ ಹುಡುಕೋದೆ ದೊಡ್ಡ ಕೆಲಸವಾಗ್ಬಿಟ್ಟಿದೆ. ನೀವು ಯಾರನ್ನೇ ರಮ್ಯಾ ಎಲ್ಲಿ? ಅಂತಾ ಕೇಳಿದ್ರೆ ಟ್ವಿಟ್ಟರ್ ನತ್ತ ಕೈತೋರಿಸ್ತಾರೆ. ಮಾತು ಯಾಕ್ ಬಂತೂ ಅಂದ್ರೆ ಕಾವೇರಿ ನೀರಿನ ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ಕೊಟ್ಟಿರೊ ತೀರ್ಪಿಗೆ ರಮ್ಯಾ ಮತ್ತೆ ಟ್ವಿಟ್ಟರ್ ನಲ್ಲೇ ಉತ್ತರಿಸಿದ್ದಾರೆ.
ರಾಜಕೀಯ ಅನ್ನೋದು ಒಂದು ಹಿಡನ್ ಅಜಂಡಾ ಇದ್ದಂಗೆ. ಆದ್ರೆ ಶ್ರೀಸಾಮಾನ್ಯರ ಜೊತೆ ಯಾಕೆ ಆಟ ಮಾಡ್ತಿವೆ ಅಂತಾ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ?ಅರೆ ರಮ್ಯಾ ಹೀಗ್ಯಾಕೆ ಟ್ವೀಟ್ ಮಾಡಿದ್ರು ಅಂತಾ ಯೋಚಿಸ್ತಿದ್ರೆ, ಅತ್ತ ವಿಶ್ಲೇಷಕರು ಅದಕ್ಕೆ ಕಾರಣ ಹುಡುಕಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪನ್ನ ನೀಡುವುದರ ಜೊತೆಗೆ ಯಾವಾಗ ಕ್ರೇಂದ್ರ ಸರ್ಕಾರಕ್ಕೆ ಈ ಇಶ್ಯೂವನ್ನ ಒಪ್ಪಿಸ್ತೋ ನೋಡಿ ಟ್ವಿಟ್ಟರ್ ಸ್ಟೇಟ್ ಮೆಂಟ್ ಕೂಡ ಚೇಂಜ್ ಆಗ್ಬಿಟ್ಟಿದೆ. ಈ ಹಿಂದೆ ಇದೇ ರಮ್ಯಾ ತಮಿಳುನಾಡಿಗೆ ನೀರು ಬಿಟ್ಟಿರುವುದರಲ್ಲಿ ಏನು ತಪ್ಪಿದೆ ಅನ್ನೋ ರೀತಿ ಸ್ಟೇಟಸ್ ಹಾಕಿಕೊಂಡಿದ್ರು.
ಅದು ದೊಡ್ಡ ರಂಪರಾದ್ಧಾಂತವಾಗಿದ್ದು ಯಾರ್ ತಾನೆ ಮರಿತಾರೆ ಹೇಳಿ. ಈಗ ಅದೇ ರಮ್ಯಾ ಬೇರೆಯದ್ದೇ ರೀತಿ ಮಾತಾಡ್ತಿದ್ದಾರೆ. ಅದೇನಾದ್ರು ಆಗ್ಲೀ ಮಾತೆತ್ತಿದ್ರೆ ಮಂಡ್ಯ ಅನ್ನೋ ರಮ್ಯಾ, ಮಂಡ್ಯಾಗೆ ಹೋಗಿ ರೈತರ ಕಷ್ಟ ಕೇಳುವ ಪ್ರಮೇಯವನ್ನೇ ಮಾಡ್ಲಿಲ್ಲಾ.
ತಮ್ಮನ್ನ ಆರಿಸಿದ ಜನರ ಹತ್ತಿರ ಹೋಗೇಕೆ ಪ್ರೊಟೆಕ್ಷನ್ ಕೇಳಿದವ್ರು., ಹೊಗ್ಲಿ ಬಿಡಿ ಅದೆಲ್ಲಾ ಹಳೆಯ ವಿಷ್ಯ ಈಗಲಾದ್ರು ಮಂಡ್ಯಕ್ಕೆ ಹೋಗಿ ರೈತರ ಪರ ನಿಲ್ಲಲಿ ಅನ್ನೋದೆ ಅವ್ರ ಅಭಿಮಾನಿಗಳ ಆಶಯ. ಏನಿ ವೇ ಅವ್ರ ಫ್ಯಾನ್ಸ್ ಆಸೆಯಂತೆ ಮಂಡ್ಯಗೆ ಹೋಗ್ತಾರೋ ಅಥವಾ ಟ್ವಿಟ್ಟರ್ ನಲ್ಲೇ ಕಾಲ ಹರಣ ಮಾಡ್ತಾರೋ ಅನ್ನೋದನ್ನ ಕಾದು ನೋಡ್ಬೇಕಿದೆ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com