ಇದೇ ವರ್ಷ ಮದ್ವೆಯಾಗಲಿದ್ದಾರಂತೆ ನಟ ದಿಗಂತ್! ಹುಡುಗಿ ಯಾರು ಗೊತ್ತಾ?

ದೂದ್ ಪೇಡ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ನಡುವೆ ಪ್ರೀತಿ-ಪ್ರೇಮ ಇದೆ ಅನ್ನೊಂದು ಮೊದಲಿಂದಲೂ ಎಲ್ಲರಿಗೂ ತಿಳಿದಿದೆ, ಈ ನಡುವೆ ದಿಗಂತ್ ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲು ಮಾಡಿದ್ದಾರೆ.

ಹೌದು, ನಟ ದಿಗಂತ್ ಅವರು ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಶಿವಣ್ಣ’ ಕಾರ್ಯಕ್ರಮದಲ್ಲಿ ಲೂಸ್ ಮಾದ ಯೋಗಿ ಜೊತೆ ಭಾಗವಹಿಸಿದ್ದರು, ಈ ನಡುವೆ ನಿಮ್ಮ ಜೀವನದಲ್ಲಿ ಯಾವ ಕ್ಷಣಕ್ಕೋಸ್ಕರ ನೀವು ಕಾಯಲು ಆಗುವುದಿಲ್ಲ, ಕಾಯುವುದಿಲ್ಲ.? ಎಂದು ಶಿವಣ್ಣ ಕೇಳಿದರು. ಅದಕ್ಕೆ ಉತ್ತರಿಸಿದ ದಿಗಂತ್, ನನ್ನ ಮದುವೆಗೆ ಕಾಯುತ್ತಿದ್ದೇನೆ. ಇದೇ ವರ್ಷ ಮದುವೆ ಆಗಲು ಮನಸ್ಸು ಮಾಡಿದ್ದೇನೆ. ಅದಕ್ಕೋಸ್ಕರ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಕೂಡಲೇ ಶಿವಣ್ಣ ಐಂದ್ರಿತಾ ರೇ ಸಿದ್ಧವಾಗಿದ್ದಾರೆ. ಮದುವೆ ಊಟಕ್ಕೆ ಕಾಯುತ್ತಿದ್ದೇವೆ. ನಾವು ಖಂಡಿತ ಮದುವೆಗೆ ಬರುತ್ತೇವೆ ಅಂತ ಹೇಳಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಶಿವಣ್ಣ ಮತ್ತೆ ಬೈಕಿನಲ್ಲಿ ಲಾಂಗ್ ಡೈವ್ ಹೋಗಬೇದಾರೆ ಯಾವ ನಟಿಯನ್ನ ಕರೆದುಕೊಂಡು ಹೋಗುತ್ತೀರಾ ಎಂದು ಕೇಳಿದ್ರು. ಗೋಕರ್ಣಕ್ಕೆ ನಿಧಿ ಸುಬ್ಬಯ್ಯ ಮತ್ತು ಊಟಿಗೆ ಐಂದ್ರಿತಾ ರೇ ಎಂದು ದಿಂಗತ್ ಉತ್ತರ ನೀಡಿದ್ದಾರೆ.

Facebook Auto Publish Powered By : XYZScripts.com