ಇದೇ ವರ್ಷ ಥಿಯೇಟರ್‌ಗೆ ಬರ್ತಿದ್ದಾನೆ ’ರಾಜಕುಮಾರ’

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರವನ್ನ ನಿರ್ದೇಶಿಸುವ ಕನಸನ್ನು ತಮ್ಮ ಎರಡನೇ ಚಿತ್ರದಲ್ಲೇ ಈಡೇರಿಸಿಕೊಂಡಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.
ಮೊದಲ ಸಿನಿಮಾದಲ್ಲೇ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಯಂತ ಸೂಪರ್ ಹಿಟ್ ಚಿತ್ರ ನೀಡಿ ತಮ್ಮ ಕನಸಿನ ರಾಜಕುಮಾರನ ಚಿತ್ರೀಕರಣದಲ್ಲಿರುವ ಆನಂದರಾಮ್ ಈಗಾಗಲೇ ಚಿತ್ರದ ಶೇಕಡ 70ರಷ್ಟು ಚಿತ್ರೀಕರಣ ಪೂರೈಸಿದ್ದಾರೆ.
ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸೇರಿದಂತೆ ವಿವಿಧ ದೇಶ ಸುತ್ತಿರುವ ಚಿತ್ರತಂಡ ಡಿಸೆಂಬರ್ ಗೆ ರಾಜಕುಮಾರನನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಶಿಷ್ಟವಾದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿ.
ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಹಾಸ್ಯನಟ ಚಿಕ್ಕಣ್ಣರ ಸಂಭಾಷಣೆ ಅಭಿಮಾನಿಗಳಿಗೆ ಮತ್ತಷ್ಟು ಜೋಶ್ ತರಿಸಿದೆ. ’ದೊಡ್ಮನೆಹುಡ್ಗ’ನ ಯಶಸ್ಸು ಪುನೀತ್ ಅಭಿಮಾನಿಗಳ ಖುಷಿಗೆ ಮತ್ತೊಂದು ಕಾರಣ. ಹೊಂಬಾಳೆ ಕ್ರಿಯೇಷನ್ಸ್ ಅಡಿ ನಿರ್ಮಾಣವಾಗುತ್ತಿರುವ ಈ ಅದ್ದೂರಿ ಚಿತ್ರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವುದು ಸುಳ್ಳಲ್ಲ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com