ಇದೇ ಕಾರಣಕ್ಕೆ ಎಲ್ಲರಿಗೂ ಇಷ್ಟವಾಗ್ತಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳು, ಗೆಳೆಯರ ಸಂಖ್ಯೆ ಜಾಸ್ತಿ. ತಮ್ಮ ಚಿತ್ರರಂಗದ ಜರ್ನಿಯಲ್ಲಿ ಜೊತೆಯಾದ ಗೆಳೆಯರಿಗೆ, ಕಿರಿಯರಿಗೆ ಅವರು ಪ್ರೋತ್ಸಾಹ ನೀಡುತ್ತಾರೆ. ಹೊಸಬರ ಪ್ರಯತ್ನಗಳಿಗೆ ಶುಭ ಹಾರೈಸುತ್ತಾರೆ. ಹಾಗಾಗಿ ದರ್ಶನ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು.

ನಟ, ನಿರ್ದೇಶಕ ಮನೋಜ್ ಅವರ ‘ಓ ಪ್ರೇಮವೇ’ ಚಿತ್ರದ ಟ್ರೇಲರ್ ಅನ್ನು ದರ್ಶನ್ ರಿಲೀಸ್ ಮಾಡಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಮನೋಜ್, ಹಿಂದಿನಿಂದಲೂ ನಾನು ಮತ್ತು ದರ್ಶನ್ ಪರಿಚಿತರಾಗಿದ್ದು, ಅವರಿಗೆ ‘ಓ ಪ್ರೇಮವೇ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದೆವು. ಅವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು, ಖುಷಿ ತಂದಿದೆ ಎಂದು ಹೇಳಿದ್ದಾರೆ.

ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದ ದರ್ಶನ್ ಅವರು, ‘ಓ ಪ್ರೇಮವೇ’ ತಂಡಕ್ಕೆ ಸಂದೇಶವನ್ನು ಕಳುಹಿಸಿ ಶುಭ ಹಾರೈಸಿದ್ದಾರೆ. ಅವರಿಗೆ ಧನ್ಯವಾದ ಹೇಳಿರುವ ಮನೋಜ್, ಪ್ರೇಮಿಗಳ ದಿನಾಚರಣೆ ಪ್ರಯುಕ್ತ ‘ಓ ಪ್ರೇಮವೇ’ ಚಿತ್ರ ತೆರೆ ಕಾಣುತ್ತಿದ್ದು, ಎಲ್ಲಾ ಪ್ರೇಮಿಗಳಿಗೆ ಸಮರ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

Facebook Auto Publish Powered By : XYZScripts.com