ಆನೆ ಸಿದ್ದನನ್ನು ನೋಡಲು ಬಂದ ’ಕರಿಚಿರತೆ’

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಕಾಡಾನೆ ಸಿದ್ದನ ಪರಿಸ್ಥಿತಿ ವಿಷಮಿಸಿದೆ. ಈ ಸಂದರ್ಭದಲ್ಲಿ ಹಲವಾರು ಜನ ಸಿದ್ದನನ್ನು ನೋಡಲು ಬರುತ್ತಿದ್ದಾರೆ. ನಟ ದುನಿಯಾ ವಿಜಯ್ ಹಾಗೂ ಅವರ ಪತ್ನಿ ಕೀರ್ತಿ ಗೌಡ ಸಹ ಇಂದು ಮಂಚನಬೆಲೆಗೆ ಬಂದು ಸಿದ್ಧನ ಆರೋಗ್ಯವನ್ನು ವಿಚಾರಿಸಿದರು.
ಕಾಲು ಮುರಿದುಕೊಂಡು ಅನಾರೋಗ್ಯಕ್ಕೆ ಒಳಗಾಗಿ ಈಗ ಸಾವುಬದುಕಿನ ನಡುವೆ ಕಾಡಾನೆ ಸಿದ್ದ ಹೋರಾಡುತ್ತಿದೆ. ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲಿ ಬೀಡು ಬಿಟ್ಟಿರುವ ಸಿದ್ದನ ಆರೋಗ್ಯವನ್ನ ಬನ್ನೇರುಘಟ್ಟದ ತಜ್ಞವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದಾರೆ.
ಸಿದ್ದನಿಗೆ ದಯಾಮರಣ ಕೊಡಬೇಡಿ, ಬೇರೆ ಕಡೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಿ ಎಂದು ಈ ಸಂದರ್ಭದಲ್ಲಿ ದುನಿಯಾ ವಿಜಯ್ ವಿನಂತಿಸಿಕೊಂಡರು. ಕಳೆದ ಒಂದು ತಿಂಗಳಿಂದ ಸಿದ್ದ ಕಾಲು ಮುರಿದುಕೊಂಡು ಅಸಾಧ್ಯ ನೋವನ್ನು ಅನುಭವಿಸುತ್ತಿದ್ದಾನೆ. ಒಂದು ವಾರದಿಂದ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರದೆ ಇರುವುದು ಪ್ರಾಣಿಪ್ರಿಯರಲ್ಲಿ ಆತಂತ ಮೂಡಿಸಿದೆ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com