ಅಲ್ಲಿ ಅಮೀರ್ ಖಾನ್, ಇಲ್ಲಿ ದುನಿಯಾ ವಿಜಯ್ ಕುಸ್ತಿಪಟು.!

ನಟ ದುನಿಯಾ ವಿಜಯ್ ಮತ್ತು ನಿರ್ದೇಶಕ ಆರ್.ಚಂದ್ರು ಕಾಂಬಿನೇಷನ್ ನಲ್ಲಿ ‘ಕನಕ’ ಸಿನಿಮಾ ಸಿದ್ದವಾಗುತ್ತಿದೆ. ‘ಕನಕ’ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಅಷ್ಟರಲ್ಲಾಗಲೇ ಇನ್ನೊಂದು ಸಿನಿಮಾಗೆ ಜೈ ಎಂದಿದೆ ಈ ಜೋಡಿ.

ವಿಶೇಷ ಏನಪ್ಪಾ ಅಂದ್ರೆ ಈ ಚಿತ್ರದಲ್ಲಿ ದುನಿಯಾ ವಿಜಿ ಕುಸ್ತಿಪಟು. ಕುಸ್ತಿಪಟು ಅಂದಾಕ್ಷಣ ಒತೆ ಆಶ್ಚರ್ಯವಾಗಬಹುದು. ಯಾಕಂದ್ರೆ, ಬಾಲಿವುಡ್ ನಲ್ಲಿ ಇತ್ತೀಗಷ್ಟೇ ಅಮೀರ್ ಖಾನ್ ‘ದಂಗಲ್’ ಅಂತ ಸಿನಿಮಾ ಮಾಡಿದ್ದರು. ಅದೇ ರೀತಿ ವಿಜಿ ಏನಾದರೂ ಸಿನಿಮಾ ಮಾಡ್ತಿದ್ದಾರ ಅಂತ ನಿರೀಕ್ಷೆ ಹುಟ್ಟಿಕೊಂಡಿದೆ.

ಆದ್ರೆ, ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಆರ್.ಚಂದ್ರು ಮತ್ತು ವಿಜಿ, ಮುಂದಿನ ಚಿತ್ರವನ್ನ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಈಗಾಗಲೇ ಕುಸ್ತಿಪಟು ಪಾತ್ರಕ್ಕಾಗಿ ದುನಿಯಾ ವಿಜಯ್ ಅವರು ತಮ್ಮ ದೇಹವನ್ನ ಮತ್ತಷ್ಟು ದೃಢವಾಗಿಸಲು ಸಜ್ಜಾಗಿದ್ದಾರಂತೆ.

ಅಂದ್ಹಾಗೆ, ‘ಕನಕ’ ಚಿತ್ರದಲ್ಲಿ ವಿಜಿಗೆ, ಮಾನ್ವಿತ ಮತ್ತು ಶ್ರದ್ಧಾ ಶ್ರೀನಾಥ್ ಜೋಡಿಯಾಗಿ ಕಾಣಸಿಕೊಳ್ಳಲಿದ್ದಾರೆ. ಅದಾದ ನಂತರ ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ‘ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾ ಶುರು ಮಾಡಲಿದ್ದಾರೆ. ಈ ಮಧ್ಯೆ ಆರ್.ಚಂದ್ರು ಇನ್ನೊಂದು ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಈಗ ಗಾಂಧಿನಗರದಲ್ಲಿ ಗಿರಗಿಟ್ಲೆ ಹೊಡಿತಿದೆ.

source: filmibeat.com

Facebook Auto Publish Powered By : XYZScripts.com