ಅಲಮೇಲಮ್ಮ ಅಡ್ಡದಲ್ಲಿ ಶ್ರದ್ಧಾ ಶ್ರೀನಾಥ್ ಸಖತ್ ಸ್ಟೆಪ್ಸ್!

ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಚಿತ್ರದ ಪ್ರಮೋಷನಲ್ ಸಾಂಗ್ ನಲ್ಲಿ ಶ್ರದ್ಧಾ ಶ್ರೀನಾಥ್ ಬಿಂದಾಸ್ ಡ್ಯಾನ್ಸ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಶ್ರದ್ಧಾ ಶ್ರಿನಾಥ್ ಅವರದು ಪಕ್ಕಾ ಟ್ರಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ತದ್ವಿರುದ್ಧ ಎಂಬಂತೆ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಮೊದಲ ಬಾರಿಗೆ ಶ್ರದ್ಧಾ ಡ್ಯಾನ್ಸ್ ಮಾಡುತ್ತಿದ್ದಾರೆ.

ಟಪ್ಪಾಂಗುಚಿ ಸ್ಟೈಲ್ ನ ಕಾಸ್ಟ್ಯೂಮ್ ಹಾಕಿಕೊಂಡು ಕುಣಿದಿದ್ದಾರೆ ಎಂದು ಗೊತ್ತಾಗಿದೆ. ಇದರ ಜೊತೆಗೆ ಸಿನಿಮಾದಲ್ಲಿ ಸೀರೆ ಉಟ್ಟು, ಟೀಚರ್ ಆಗಿ ಕಾಣಿಸಿಕೊಂಡಿರೋದು ಇನ್ನೊಂದು ವಿಶೇಷ. ಚಿತ್ರದಲ್ಲಿ ನಾಯಕ ರಿಷಿ ತರಕಾರಿ ಮಾರುವವನ ಪಾತ್ರದಲ್ಲಿ ನಟಿಸಿದ್ದಾರೆ.

ಚಿಕ್ಕಂದಿನಿಂದ ಭರತ ನಾಟ್ಯ ಕಲಿತಿದ್ದರೂ ಈ ಡ್ಯಾನ್ಸ್ ಮಾಡುವುದು ನನಗೆ ಚಾಲೆಂಜ್ ಆಗಿತ್ತು. ಹಿಂದೆಂದೂ ಈ ರೀತಿಯ ಡಾನ್ಸ್ ನಾನು ಮಾಡಿರಲಿಲ್ಲ ಎಂದಿದ್ದಾರೆ ಶ್ರದ್ಧಾ.

Courtesy: Kannada News Now

Facebook Auto Publish Powered By : XYZScripts.com