ಅರ್ಧ ವರ್ಷದಲ್ಲಿ ಸ್ಯಾಂಡಲ್ ವುಡ್ ನ ಸೋಲು-ಗೆಲುವಿನ ಲೆಕ್ಕಾಚಾರ

ಜನವರಿ 6…..ರಮೇಶ್ ಅರವಿಂದ್ ಅಭಿನಯದ 100ನೇ ಚಿತ್ರ ‘ಪುಷ್ಪಕ ವಿಮಾನ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ 2017ನೇ ವರ್ಷದ ಶುಭಾರಂಭ ಮಾಡಿತ್ತು. ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆನೂ ಸಿಕ್ತು. ಹೀಗಾಗಿ, ವರ್ಷದ ಮೊದಲ ಹಿಟ್ ಸಿನಿಮಾ ಆಗಿ ಹೊರಹೊಮ್ಮಿತ್ತು.

ಇನ್ನು ಅದೇ ದಿನ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಶ್ರೀಕಂಠ ಚಿತ್ರವೂ ಬಿಡುಗಡೆಯಾಗಿತ್ತು. ಈ ಚಿತ್ರಕ್ಕು ಭರ್ಜರಿ ಯಶಸ್ಸು ಸಕ್ಕಿತ್ತು. ಈ ಮೂಲಕ ಈ ವರ್ಷದಲ್ಲಿ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾಗುವುದರ ಜೊತೆ ವರ್ಷಕ್ಕೆ ಚಾಲನೆ ನೀಡಲಾಯಿತು.

SHARE MARKET TRADING

Wondering if it is the right time to start investing in shares? As an
investor, you may never be able to time the market.

The healthier strategy, however, is to invest over a medium to long term in a systematic fashion so that you can average your buying cost. Our 3-in-1 account makes Share Market Trading simpler, faster and better. You can invest in stocks, mutual funds, derivatives, IPOs and much more on the click of a button. This account has a Trading account (from which you can buy and sell shares and other instruments of your choice), Demat Account (mandatory to hold your investments) and a linked Bank account which makes your share trading experience simple and seamless.

ನೀನಾಸಂ ಸತೀಶ್ ಮತ್ತು ಶ್ರುತಿ ಹರಿಹರನ್ ಜೋಡಿ ‘ಬ್ಯೂಟಿಫುಲ್ ಮನಸ್ಸುಗಳು’ ರಿಲೀಸ್ ಆಗಿ ದೊಡ್ಡ ಜಯ ಗಳಿಸಿತ್ತು. ಈ ವರ್ಷದ ಮ್ಯೂಸಿಕಲ್ ಹಿಟ್ ಸಿನಿಮಾ ಎನಿಸಿಕೊಂಡಿತ್ತು.

ದ್ವಾರಕೀಶ್ ನಿರ್ಮಾಣ ಸಂಸ್ಥೆಯಿಂದ ಹೊರ ಬಂದ ಚೌಕ ಸಿನಿಮಾ ಈ ವರ್ಷ ಅತಿ ದೊಡ್ಡ ಸಕ್ಸಸ್ ಕಂಡ ಸಿನಿಮಾ. ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆಯಾದ ‘ಚೌಕ’ 100 ದಿನಗಳನ್ನ ಪೂರೈಸಿ ಈ ವರ್ಷದ ಮೊದಲ ಸೆಂಚುರಿ ಸಿನಿಮಾ ಎನಿಸಿಕೊಂಡಿತ್ತು.

ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರ ಯಶಸ್ವಿ 50 ದಿನಗಳನ್ನ ಪೂರೈಸಿ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಬಿಸ್ ನೆಸ್ ಮಾಡಿತ್ತು. ದಾಖಲೆಯ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು.

ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರ 2017 ನೇ ಸಾಲಿನ ಆಲ್ ಟೈಮ್ ಸೂಪರ್ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ. ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಆಗಿದ್ದ ಈ ಚಿತ್ರವನ್ನ ಕನ್ನಡ ಪ್ರೇಕ್ಷಕರು ಎರಡು ಕೈಗಳಿಂದ .ಅಪ್ಪಿಕೊಂಡರು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಗಳಿಸಿದ ಈ ಚಿತ್ರ 100 ನೇ ದಿನದತ್ತ ಸಾಗಿದೆ.

ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಬಂದರು, ದುಡ್ಡು ಮಾಡುವುದರಲ್ಲಿ ಸಿನಿಮಾ ಹಿಂದೆ ಬಿದ್ದಿಲ್ಲ. ಇನ್ನು ಮಧ್ಯರಾತ್ರಿ 12 ಗಂಟೆಗೆ ಪ್ರದರ್ಶನ ಶುರುಮಾಡಿ ಕನ್ನಡದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರಕ್ಕೆ ರಾಜ್ಯಾದ್ಯಂತ ಅದ್ಬುತ ಸ್ವಾಗತ ಸಿಕ್ಕಿದೆ. ರೈತರ ಪರ ಕಥೆ ಹಣೆಯಲಾಗಿದ್ದ ಈ ಚಿತ್ರ ರಾಜಕೀಯ ನಾಯಕರು ಸೇರಿದಂತೆ ರೈತರ ಮನ ಗೆಲ್ಲುವಲ್ಲಿ ಯಶಸ್ಸಾಗಿದೆ.

ಗುರುಪ್ರಸಾದ್ ನಿರ್ದೇಶನದ ‘ಎರಡನೇ ಸಲ’, ಸಸ್ಪೆನ್ಸ್ ಥ್ರಿಲ್ಲಿಂಗ್ ಸಿನಿಮಾ ‘ಶುದ್ದಿ’, ಮಹಿಳಾ ಪ್ರಧಾನ ಚಿತ್ರ ‘ಊರ್ವಿ’, ‘ರಾಗ’, ‘ಅಲ್ಲಮ’, ‘ಹ್ಯಾಪಿ ನ್ಯೂ ಇಯರ್’, ‘ಬಿಬಿ5’, ‘ಮನಸು ಮಲ್ಲಿಗೆ’ ಅಂತಹ ಸಿನಿಮಾ ವಿಭಿನ್ನ ಕಥೆ ಮತ್ತು ಮೇಕಿಂಗ್ ವಿಚಾರಕ್ಕೆ ಗಮನ ಸೆಳೆದಿವೆ.

ಸುಮಂತ್ ಶೈಲೇಂದ್ರ ಅಭಿನಯದ ‘ಲೀ’, ‘ಮೇಲುಕೋಟೆ ಮಂಜ’, ‘ಸ್ಮೈಲ್ ಪ್ಲೀಸ್’, ಪೂಜಾಗಾಂಧಿಯ ‘ಜೀಲೆಬಿ’, ವಿಜಯ ರಾಘವೇಂದ್ರ ಅವರ ‘ಎರಡು ಕನಸು’, ರೋಗ್’, ‘ಮಾಸ್ತಿಗುಡಿ’, ‘ಪಟಾಕಿ’, ‘ಬೆಂಗಳೂರು ಅಂಡರ್ ವರ್ಲ್ಡ್’ ಸೇರಿದಂತೆ ಹಲವು ಚಿತ್ರಗಳು ಸಾಧಾರಣ ಯಶಸ್ಸು ಕಂಡರು ಜನರ ನಿರೀಕ್ಷೆಯನ್ನ ತಲುಪಲಿಲ್ಲ.

Courtesy: Filmibeat.com

Facebook Auto Publish Powered By : XYZScripts.com