‘ಅಮರ್ ಅಕ್ಬರ್ ಆಂಟೋನಿ’ ಮುಂಬೈನಲ್ಲಿ ರೀ ರಿಲೀಸ್

1977ರಲ್ಲಿ ಬಿಡುಗಡೆಯಾಗಿ ಅಮರ್ ಅಕ್ಬರ್ ಆಂಟೋನಿ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ. ಚಿತ್ರ ಪ್ರೇಮಿಗಳ ಮನಗೆದ್ದಿದ್ದ ಈ ಸಿನಿಮಾ ಆ ಕಾಲದಲ್ಲಿ ಹೊಸ ಟ್ರೆಂಟ್ ಕ್ರಿಯೇಟ್ ಮಾಡಿತ್ತು. ಸಿನಿರಂಗದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ್ದ ಅಮರ್ ಅಕ್ಬರ್ ಆಂಟೋನಿ ಚಿತ್ರ ಮುಂಬೈನಲ್ಲಿ ಮತ್ತೆ ತೆರೆ ಕಂಡಿದೆ.
ಇಂದಿನ ಯುವಪೀಳಿಗೆಗೆ ರೆಟ್ರೋ ಹಾಡುಗಳ ಮಾಧುರ್ಯವನ್ನು ತಿಳಿಸಲು ಹಾಗೂ ಜನರನ್ನು ಮತ್ತೆ ಹಳೆ ನೆನಪುಗಳ ದೋಣಿಯಲ್ಲಿ ಸಾಗಿಸುವ ಸಲುವಾಗಿ ಶೆಮರೂ ಎಂಟರ್ಟೈನ್ ಮೆಂಟ್ಸ್ ಫಿಲ್ಮಿಗಾನೆ ಯೂಟ್ಯೂಬ್ ಚಾನೆಲ್ ಮತ್ತು 91.9 ಎಫ್ ಎಂ ರೆಡಿಯೋ ನಶಾ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಇದರ ಅಂಗವಾಗಿ ಮುಂಬೈನಲ್ಲಿ ಅಮರ್ ಅಕ್ಬರ್ ಅಂಥೋಣಿ ಚಿತ್ರ ಪ್ರದರ್ಶನವನ್ನು ಮುಂಬೈ ಥಿಯೇಟರ್ ನಲ್ಲಿ ಆಯೋಜಿಸಿತ್ತು.
ಮನ್ ಮೋಹನ್ ದೇಸಾಯಿ ನಿರ್ದೇಶನದ ಅಮರ್ ಅಕ್ಬರ್ ಅಂಟೋನಿ ಚಿತ್ರ ಆ ಕಾಲದಲ್ಲಿ ಬಾಕ್ಸ್ ಆಫೀಸನ್ನು ಧೂಳಿಪಟ ಮಾಡಿತ್ತು. ಚಿತ್ರದಲ್ಲಿ ವಿನೋದ್ ಖನ್ನಾ, ರಿಶಿ ಕಪೂರ್, ಅಮಿತಾ ಬಚ್ಚನ್, ಶಭಾನಾ ಅಜ್ಮಿ, ನೀತು ಸಿಂಗ್ ಮತ್ತು ಪ್ರವೀಣ್ ಬಾಬಿ ಹಾಗೂ ಇನ್ನಿತರ ನಟನಟಿಯರು ಚಿತ್ರದಲ್ಲಿ ಅಭಿನಯಿಸಿದ್ದರು.
ಭಾರತೀಯ ಸಿನಿಮಾರಂಗದಲ್ಲಿ ಈ ಚಿತ್ರ ಹೊಸ ಚರಿತ್ರೆಯನ್ನು ನಿರ್ಮಿಸಿತ್ತು. ಇಂತಹ ಸಿನಿಮಾವನ್ನು ಯುವಪೀಳಿಗೆಯೂ ನೋಡಬೇಕು ಎಂಬ ಉದ್ದೇಶದಿಂದ ಈ ಚಿತ್ರವನ್ನು ಮತ್ತೆ ಪ್ರದರ್ಶನಕ್ಕೆ ಏರ್ಪಾಡು ಮಾಡಲಾಗಿತ್ತು.
Courtesy: Balkani News

Facebook Auto Publish Powered By : XYZScripts.com