ದರ್ಶನ ಬಗ್ಗೆ ಮಾತನಾಡಿದ ಸುದೀಪ್.. ಏನಂದ್ರು ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಈಗ ಸ್ನೇಹಿತರಲ್ಲ. ಅವರಿಬ್ಬರು ಒಂದೇ ಸಿನಿಮಾರಂಗದಲ್ಲಿ ಅಭಿನಯಿಸುತ್ತಿರುವ ಕಲಾವಿದರಷ್ಟೆ. ಈ ಮಾತನ್ನ ದರ್ಶನ್ ಅವರೇ ಖಚಿತ ಪಡಿಸಿದ್ದರು. ಇದಾದ ನಂತರ್ ದರ್ಶನ್ ಬಗ್ಗೆ ಸುದೀಪ್ ಅವರಾಗಲಿ, ಸುದೀಪ್ ಬಗ್ಗೆ ದರ್ಶನ್ ಅವರಾಗಲಿ ಎಲ್ಲಿಯೂ ಮಾತನಾಡಿಲ್ಲ.

ದರ್ಶನ್ ಬಳಗಕ್ಕೆ ಸೇರಿಕೊಂಡ ಪುಟ್ಟಗೌರಿ

ಸ್ನೇಹಿತರಾದ ನಂತರ ಸದಾ ಜೊತೆಯಲ್ಲೇ ಓಡಾಡಿಕೊಂಡಿದ್ದ ದರ್ಶನ್ ಮತ್ತು ಕಿಚ್ಚ ಸುದೀಪ್ ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ. ಅಭಿಮಾನಿಗಳು ಕೆಲ ದಿನಗಳು ಈ ಬಗ್ಗೆ ಪ್ರಶ್ನೆ ಮಾಡಿ ನಂತರ ಈ ವಿಚಾರವನ್ನ ಇಲ್ಲಿಗೆ ಬಿಟ್ಟುಬಿಡುವುದು ಸೂಕ್ತ ಎಂದು ನಿರ್ಧರಿಸಿದರು.

ಆದರೆ ಕಿಚ್ಚ ಸುದೀಪ್ ಅವರು ದರ್ಶನ್ ಬಗ್ಗೆ ಮಾತನಾಡಿರುವುದು ಅಭಿಮಾನಿಗಳ ಮನಸ್ಸಿನಲ್ಲಿ ಆಶಾಕಿರಣ ಮೂಡಿಸಿದೆ. ಸುದೀಪ್ ಬಿಗ್ ಬಾಸ್ ವೇದಿಕೆ ಮೇಲೆ ದರ್ಶನ್ ಬಗ್ಗೆ ಪ್ರಶ್ನೆಗಳನ್ನ ಕೇಳಿದ್ದು ಮತ್ತೆ ಇವರಿಬ್ಬರು ಒಂದಾಗಬಹುದಾ ಎನ್ನುವ ಕುತೂಹಲ ಹೆಚ್ಚಿಸಿದೆ. ಹಾಗಾದ್ರೆ ಸುದೀಪ್ ದರ್ಶನ್ ಅವರ ಹೆಸರು ಸ್ಟೇಜ್ ಮೇಲೆ ಹೇಳಿದ್ದು ಏಕೆ? ಮುಂದೆ ಓದಿ ..

ದರ್ಶನ್ ಮತ್ತು ಸುದೀಪ್ ಅವರ ಸ್ನೇಹವನ್ನ ಕಂಡು ಸಾಕಷ್ಟು ಜನರು ಖುಷಿ ಪಟ್ಟಿದ್ದರು. ಇವರಂತೆ ಸ್ನೇಹಿತರಾಗಿರಬೇಕು ಎಂದು ಮಾತಾಡಿದ್ದರು. ಆದರೆ ಈ ಗೆಳೆತನ ಹೆಚ್ಚಿನ ದಿನ ಉಳಿಯಲಿಲ್ಲ. ಇಬ್ಬರು ಮುನಿಸಿಕೊಂಡ ತುಂಬಾ ದಿನಗಳ ನಂತದ ಸುದೀಪ್ ಬಾಯಲ್ಲಿ ದರ್ಶನ್ ಹೆಸರು ಕೇಳಿ ಬಂದಿದೆ.

ಬಿಗ್ ಬಾಸ್ ಫೈನಲ್ಸ್ ನಲ್ಲಿ ಪ್ರೇಮಬರಹ ಸಿನಿಮಾದ ಟ್ರೇಲರ್ ಪ್ರದರ್ಶನ ಮಾಡಲಾಯ್ತು. ಚಿತ್ರದಲ್ಲಿ ಡಿ ಬಾಸ್ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಬಗ್ಗೆ ನಟ ಚಂದನ್ ಅವರ ಬಳಿಯಲ್ಲಿ ಸುದೀಪ್ ಪ್ರಶ್ನೆಗಳನ್ನ ಕೇಳಿದರು. ಈ ಮೂಲಕ ತಮ್ಮ ಆಪ್ತ ಗೆಳೆಯನ ನೆನಪು ಮಾಡಿಕೊಂಡರು.

ಸುದೀಪ್ ಹಾಗೂ ದರ್ಶನ್ ಇಬ್ಬರು ಅಪಾರ ಅಭಿಮಾನಿಗಳನ್ನ ಪಡೆದುಕೊಂಡಿರುವ ಸ್ಟಾರ್ ನಟರು. ಅಭಿನಯದಲ್ಲಿ ಮಾತ್ರವಲ್ಲದೆ ಬೇರೆ ರೀತಿಯಲ್ಲೂ ಅನೇಕರಿಗೆ ಮಾದರಿಯಾಗುವಂತೆ ಜೀವನ ನಡೆಸುತ್ತಿದ್ದಾರೆ. ಇದೇ ಉದ್ದೇಶದಿಂದ ಇವರಿಬ್ಬರು ಒಂದಾಗಲಿ ಎನ್ನುವ ಹಂಬಲ ಅಭಿಮಾನಿಗಳಿಗೆ ಇದೆ.

ಸ್ಟಾರ್ ಕಲಾವಿದರಿಗೆ ಸಾಮಾನ್ಯವಾಗಿ ಅಭಿಮಾನಿಗಳು ಹೆಚ್ಚಾಗಿರುತ್ತಾರೆ. ನಮ್ಮ ಸ್ಟಾರ್ ಹೆಚ್ಚು ನಿಮ್ಮ ಸ್ಟಾರ್ ಕಡಿಮೆ ಎನ್ನುವ ವಾದಗಳು ಆಗಾಗ ನಡೆಯುತ್ತಿರುತ್ತವೆ. ಆದರೆ ಸುದೀಪ್ ಮತ್ತು ದರ್ಶನ್ ವಿಚಾರದಲ್ಲಿ ಆಗಿಲ್ಲ. ಇಬ್ಬರ ಅಭಿಮಾನಿಗಳು ದಚ್ಚು ಹಾಗೂ ಕಿಚ್ಚನ ಸಿನಿಮಾಗಳನ್ನ ನೋಡುತ್ತಾರೆ.

Facebook Auto Publish Powered By : XYZScripts.com