ಅಬ್ಬಾ..! ನಿಂಬೆಯಿಂದ ಇಷ್ಟೆಲ್ಲಾ ಲಾಭಗಳಿವೆಯಾ..?

ಆರ್ಯುವೇದ, ಗಿಡಮೂಲಿಕೆ ಮತ್ತು ಮನೆಮದ್ದು ಅನ್ನೋ ವಿಷ್ಯ ಬಂದಾಗ ನಿಂಬೆ ಎಲ್ಲದಕ್ಕಿಂತಲೂ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ನಿಂಬೆಗೆ ದೈವಿಶಕ್ತಿಯೂ ಇದೆ ಔಷಧಿ ಗುಣಗಳೂ ಇವೆ. ನಿಂಬೆಯನ್ನು ಸೇವಿಸೋದರ ಜೊತೆ ಬಾಹ್ಯವಾಗಿಯು ಉಪಯೋಗಿಸಬಹುದು. ದೇಹಕ್ಕೆ ಔಷಧಿ ಮತ್ತು ಸೌಂದರ್ಯ ವರ್ಧಕ ಕೂಡ ಹೌದು. ನಿಂಬೆಯನ್ನು ಪ್ರತಿ ದಿನ ಸೇವಿಸೋದ್ರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.
ನಿಂಬೆಯಲ್ಲಿ ಸಿಟ್ರಿಕ್ ಆಸಿಡ್, ಮೇಗ್ನಿಷಿಯಂ, ಕ್ಯಾಲ್ಸಿಯಂ, ಫಾಸ್ಟರಸ್ ಮತ್ತು ಹೇರಳವಾಗಿ ವಿಟಾಮಿನ್ ’ಸಿ’ ಜೊತೆಗೆ `ಎ’ ಇದೆ. ಈ ಎಲ್ಲ ಅಂಶಗಳಿರೋ ನಿಂಬೆಯಿಂದ ಅದೆಷ್ಟೋ ಪ್ರಯೋಜನಗಳಿವೆ. ನಿಂಬೆಯ ಬಳಕೆಯಿಂದ ಆಗುವ ಲಾಭಗಳು ಇಲ್ಲಿ ಪಟ್ಟಿ ಮಾಡಿದ್ದೇವೆ ನೋಡಿ.
• ರಕ್ತಶುದ್ಧಿ ಮಾಡುತ್ತೆ: ನಿಂಬೆಯನ್ನು ದಿನನಿತ್ಯ ಆಹಾರದ ಜೊತೆ ಸೇವನೆ ಮಾಡಿದ್ರೆ ರಕ್ತಶುದ್ಧಿ ಆಗುತ್ತದೆ. ಮಾಡುವ ಅಡುಗೆಯಲ್ಲಿ ನಿಂಬೆ ಬಳಸಿದ್ರೆ ರುಚಿಯ ಜೊತೆ ರಕ್ತಶುದ್ಧಿ ಕಾರ್ಯ ಕೂಡ ಮಾಡುತ್ತೆ.
• ದೇಹಕ್ಕೆ ತಂಪು: ಬಿಸಿಲಿನ ಧಗೆಯಲ್ಲಿ ಬೆಂದು ಬಂದಾಗ ನಿಂಬೆ ಪಾನಕ ಕೊಡುವಷ್ಟು ತಂಪು ಮತ್ಯಾವ ಪಾನೀಯವೂ ಕೊಡೋಕೆ ಸಾಧ್ಯವಿಲ್ಲ. ಆದ್ದರಿಂದ ಬೇಸಿಗೆ ಸಮಯದಲ್ಲಿ ನಿಂಬೆ ಪಾನಕ ದಿನಕ್ಕೆ 2 ಬಾರಿಯಾದರೂ ಸೇವಿಸಿ ದೇಹವನ್ನು ತಂಪಾಗಿ ಇರಿಸಿಕೊಳ್ಳಿ.
• ಆಂಟಿಸೆಪ್ಟಿಕ್ ಗುಣ: ನಿಂಬೆ ಆಂಟಿಸೆಪ್ಟಿಕ್ ಆಗಿ ಕೆಲಸ ಮಾಡುತ್ತದೆ. ಉಟದ ಜೊತೆ ನಿಂಬೆ ಸೇವನೆ ಅಥವಾ ರೋಗಕ್ಕೆ ತುತ್ತಾದಾಗ ನಿಂಬೆಯನ್ನು ನಿಯಮಿತವಾಗಿ ಸೇವನೆ ಮಾಡಿದ್ರೆ ರೋಗ ಬೇಗನೇ ವಾಸಿಯಾಗುತ್ತದೆ. ನಿಂಬೆಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತದೆ.
• ದೇಹಕ್ಕೆ ಶಕ್ತಿ: ನಿಂಬೆಯಲ್ಲಿ ವಿಟಾಮಿನ್ `ಎ’ ಇರೋದ್ರಿಂದ ಆಯಾಸ ಕಡಿಮೆ ಮಾಡುತ್ತದೆ. ದೇಹಕ್ಕೆ ತಂಪು ನೀಡೊದ್ರ ಜೊತೆಗೆ ಆಯಾಸ ಕಡಿಮೆ ಮಾಡಿ ದೇಹಕ್ಕೆ ಶಕ್ತಿ ನೀಡುತ್ತದೆ. ನಿಂಬೆ ದೇಹಕ್ಕೆ ಶಕ್ತಿ ವರ್ಧಕ ಇದ್ದ ಹಾಗೆ ನಿತ್ಯ ನಿಂಬೆ ಸೇವನೆ ಮಾಡೋರು ತುಂಬಾ ಬಲಶಾಲಿಯಾಗಿರ್ತಾರೆ.
• ಜೀರ್ಣಕ್ರಿಯೆಗೆ ಸಹಾಯ: ಜೀರ್ಣಕ್ರಿಯೆ ಉತ್ತಮವಾಗಿ ಆಗಲು ನಿಂಬೆ ಬಹು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ತಿಳಿ ಮಜ್ಜಿಗೆಗೆ ನಿಂಬೆ ರಸ ಬೆಸರಿ ಊಟದ ನಂತ್ರ ಸೇವಿಸಿದ್ರೆ ತಿಂದ ಆಹಾರ ಚೆನ್ನಾಗಿ ಜೀರ್ಣ ಆಗುತ್ತದೆ.
• ಕೂದಲು ಹೊಟ್ಟಿನ ಸಮಸ್ಯೆ ನಿವಾರಣೆ: ಕೂದಲು ಹೊಟ್ಟಿನ ಸಮಸ್ಯೆ ಇದ್ದರೆ ಕೂದಲಿನ ಎಣ್ಣೆ ಮಸಾಜ್ ನಂತ್ರ ನಿಂಬೆಯನ್ನು ಕತ್ತರಿಸಿ ಕೂದಲು ಬೇರಿಗೆ ನಯವಾಗಿ ಉಜ್ಜಿ. ಹೀಗೆ ಮಾಡಿ ಒಂದು ಗಂಟೆ ಬಿಟ್ಟು ತಲೆಸ್ನಾನ ಮಾಡಿ ತಲೆ ಹೊಟ್ಟು ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ. ಮತ್ತು ಕೂದಲು ಉದುರವುದು ಸಹ ಕಡಿಮೆಯಾಗುತ್ತದೆ.
• ವಸಡು ಗಟ್ಟಿಯಾಗಿರಿಸುತ್ತದೆ: ಉಪ್ಪಿಗೆ ನಿಂಬೆರಸವನ್ನು ಹಿಂಡಿ ಈ ಮಿಶ್ರಣದಿಂದ ಹಲ್ಲು ಉಜ್ಜಿದರೆ ಹಲ್ಲಿನ ವಸಡು ಗಟ್ಟಿಯಾಗಿರುತ್ತದೆ. ಮತ್ತು ಹಲ್ಲುಗಳು ಸಹ ಹೊಳೆಯುತ್ತವೆ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com