ಅನಿರ್ಧಿಷ್ಟಾವಧಿ ಕಾಲ ಕನ್ನಡ ಹೊಸ ಚಿತ್ರಗಳ ಬಿಡುಗಡೆ ಇಲ್ಲ, ಯಾಕೆ?.. ಇಲ್ಲಿ ಓದಿ

 ಉಪಗ್ರಹ ಆಧಾರಿತ ಚಿತ್ರಪ್ರದರ್ಶನಕ್ಕೆ ದುಬಾರಿ ಶುಲ್ಕ ವಿಚಾರದ ಸಂಬಂಧ ಒಂದು ದಿನದ ಮಟ್ಟಿಗೆ ಟೋಲ್ ಸ್ಟ್ರೈಕ್ ಮಾಡುವ ಮೂಲ ಎಲ್ಲ ಸಿನಿಮಾಗಳ ಪ್ರದರ್ಶನ ಬಂದ್ ಮಾಡಲಾಗುವುದು ಎಂದು ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದ್ ಹೇಳಿದ್ದಾರೆ.

ಆದ್ದರಿಂದ ಮಾರ್ಚ್ 9 ರಂದು ರಾಜ್ಯಾದ್ಯಂತ ಯಾವುದೇ ಚಿತ್ರ ಪ್ರದರ್ಶನ ಕಾಣುವುದಿಲ್ಲ. ಮಾರ್ಚ್ 10 ರಿಂದ ಎಂದಿನಂತೆ ಈಗಾಗಲೇ ತೆರೆಕಂಡಿರೋ ಚಿತ್ರಗಳ ಪ್ರದರ್ಶನ ಮುಂದುವರಿಕೆಯಾಗಲಿದೆ.

ಶುಲ್ಕ ವಿಚಾರದಲ್ಲಿ ಒಮ್ಮತ ಮೂಡುವರೆಗೂ ಅನಿರ್ಧಿಷ್ಟಾವಧಿ ಕಾಲ ಹೊಸ ಚಿತ್ರಗಳ ಬಿಡುಗಡೆ ಇಲ್ಲ. ಆದರೆ ಈಗಾಗಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಚಿತ್ರಗಳು ಎಂದಿನಂತೆ ಪ್ರದರ್ಶನ ಕಾಣುತ್ತದೆ ಎಂದು ಎಂದು ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದ್ ತಿಳಿಸಿದ್ದಾರೆ.

Facebook Auto Publish Powered By : XYZScripts.com