ಅದ್ಧೂರಿಯಾಗಿ ಆರಂಭವಾಯ್ತು ಕಿಚ್ಚನ ‘ಕೋಟಿಗೊಬ್ಬ -3’ ಮುಹೂರ್ತ

ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಕೋಟಿಗೊಬ್ಬ -3’ ಇದೇ ವರ್ಷಾಂತ್ಯಕ್ಕೆ ತೆರೆ ಕಾಣಲಿದೆ.

ಬೆಂಗಳೂರು ಮಲ್ಲೇಶ್ವರಂ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ಸುದೀಪ್ ಅವರ ತಂದೆ ಸಂಜೀವ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದಾರೆ. ಪತ್ನಿ ಪ್ರಿಯಾ ಸುದೀಪ್ ದೀಪ ಬೆಳಗಿಸಿ ಶುಭ ಹಾರೈಸಿದ್ದಾರೆ. ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಮುನಿರತ್ನ, ಸಿ.ಆರ್. ಮನೋಹರ್ ಹಾಗೂ ಚಿತ್ರತಂಡದವರು ಈ ಸಂದರ್ಭದಲ್ಲಿ ಇದ್ದರು.

‘ಕೋಟಿಗೊಬ್ಬ -2’ ಭರ್ಜರಿ ಯಶಸ್ಸು ಕಂಡಿತ್ತು. ಈಗ ‘ಕೋಟಿಗೊಬ್ಬ -3’ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಇದೇ ತಿಂಗಳಾಂತ್ಯಕ್ಕೆ ಚಿತ್ರೀಕರಣ ಆರಂಭಕ್ಕೆ ಪ್ಲಾನ್ ಮಾಡಲಾಗಿದೆ.

 

Facebook Auto Publish Powered By : XYZScripts.com