ಅತಿರೇಕದ ಅಭಿಮಾನಕ್ಕೆ ಸುದೀಪ್ ಆಕ್ಷೇಪ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಕನ್ನಡ ಮಾತ್ರವಲ್ಲದೇ, ತೆಲುಗು, ಹಿಂದಿ, ತಮಿಳು ಚಿತ್ರರಂಗದಲ್ಲಿ ಮಿಂಚಿರುವ ಅವರು ಮಲಯಾಳಂ, ಹಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ಕೊಡಲಿದ್ದಾರೆ.

ಬಿಗ್ ಫ್ಯಾನ್ ಫಾಲೋಯರ್ಸ್ ಹೊಂದಿರುವ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.

ಅಭಿಮಾನಿಗಳು ಕೂಡ ನೆಚ್ಚಿನ ನಟನ ಚಿತ್ರ, ಟ್ಯಾಟೂ ಬರಹಗಳ ಮೂಲಕ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಆದರೆ, ಅಭಿಮಾನಿಯೊಬ್ಬರು ಕೈಯನ್ನು ಕೊಯ್ದುಕೊಂಡು ರಕ್ತದಲ್ಲಿ ಕಿಚ್ಚ ಎಂದು ಬರೆಸಿಕೊಂಡಿದ್ದಾರೆ.

ಈ ಫೋಟೋವನ್ನು ಟ್ವಿಟರ್ ನಲ್ಲಿ ಹಾಕಿದ್ದು, ಇದಕ್ಕೆ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮ ಅಭಿಮಾನ, ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ಈ ರೀತಿ ಯಾರೂ ಮಾಡಬಾರದು ಎಂದು ಬುದ್ಧಿಮಾತು ಹೇಳಿದ್ದಾರೆ.

‘ಪ್ರೀತಿಗಾಗಿ ಧನ್ಯವಾದಗಳು . ಆದರೆ ಅಭಿಮಾನ ವ್ಯಕ್ತಪಡಿಸಲು ಅನೇಕ ಮಾರ್ಗಗಳಿವೆ. ನಿಮ್ಮ ಅಭಿಮಾನದ ಬಗ್ಗೆ ನನಗೆ ಖಾತ್ರಿಯಿದೆ, ದಯವಿಟ್ಟು ಇದನ್ನು ಪುನರಾವರ್ತಿಸಬೇಡಿ’ ಎಂದು ತಿಳಿಸಿದ್ದಾರೆ.

Courtesy: kannadaduniya.com

Facebook Auto Publish Powered By : XYZScripts.com