ಅಂಬಿ ನಿಂಗ್ ವಯಸ್ಸಾಯ್ತೋ ಅಂಬರೀಶ್ ಅವರ ಕೊನೆಯ ಚಿತ್ರಾನಾ? ಇಲ್ಲಿದೆ ಉತ್ತರ

ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಬಿಡುಗಡೆ ಪತ್ರಿಕಾಗೋಷ್ಟಿಗೆ ಎಲ್ಲರಿಗಿಂತ ಮೊದಲೇ ಆಗಮಿಸಿದ್ದ ಅಂಬರೀಶ್ ಎಂದಿನಂತೆ ತಮ್ಮ ಸ್ಟೈಲಿನಲ್ಲಿ ಹರಟೆ ಶುರು ಮಾಡಿದರು. ಪತ್ರಕರ್ತರಿಗೂ ಅಂಬರೀಶ್ ಅವರಿಗೆ ಪ್ರಶ್ನೆ ಕೇಳಕ್ಕೆ ಎಲ್ಲಿಲ್ಲದ ಉತ್ಸಾಹ. ಪತ್ರಕರ್ತರೊಬ್ಬರು ಅಂಬರೀಷ್ ಅವರೇ ಇದುವೇ ನಿಮ್ಮ ಕೊನೆಯ ಚಿತ್ರಾನಾ ಎಂದು ಕೇಳಿ ಬಿಟ್ಟರು.

ಅದಕ್ಕೆ ಅಂಬರೀಶ್ ತಮಾಷೆಗೆ ‘ಹೌದಪ್ಪ ಇದೇ ನನ್ ಕೊನೆಯ ಚಿತ್ರ’ ಎಂದುಬಿಟ್ಟರು.

ಆ ಮಾತಿನ ಅರ್ಥವಿಷ್ಟೆ, ಮುಂದೆಯೂ ತಾವು ಸಿನಿಮಾ ಮಾಡಬೇಕು ಅಂದ್ರೆ ತಮ್ಮ ವಯಸ್ಸಿಗೆ ತಕ್ಕಂತೆ ಕತೆಗಳು ಬರಬೇಕು, ಹಾಗಾದ್ರೆ ಮಾತ್ರ ಅನ್ನುವುದು ಅವರ ಮಾತಿನ ತಾತ್ಪರ್ಯವಾಗಿತ್ತು. ಅಷ್ಟೇ. ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರವೇ ರೆಬೆಲ್ ಸ್ಟಾರ್ ಕೊನೆಯ ಚಿತ್ರ ಎಂಬ ಸುದ್ದಿ ಸುಳ್ಳು. ಅಂಬರೀಶ್ ಇದು ನನ್ನ ಕೊನೆಯ ಸಿನಿಮಾ ಎಂದು ಎಲ್ಲಿಯೂ ಹೇಳಿಲ್ಲ.

ಮುಂದೆ ಮಾತನಾಡಿದ ಅವರು, ಈ ಚಿತ್ರದ ನಿರ್ದೇಶಕ ಅಂತ ಸುದೀಪ್ ಅವರು ಅಂಬರೀಶ್ ಅವರ ಬಳಿಗೆ ಕಳುಹಿಸಿಕೊಟ್ಟಿದ್ದು ಗುರುದತ್ತ ಗಾಣಿಗ ಅವರನ್ನ. ‘ಮಾಮ ನನ್ನ ಬಳಿ ಒಬ್ಬ ಹುಡುಗ ಇದ್ದಾನೆ. ಟ್ಯಾಲೆಂಟೆಡ್ ಫೆಲೋ. ಅವನನ್ನ ನೋಡಿದರೆ ಚಿಕ್ಕ ಹುಡುಗನ ರೀತಿ ಕಾಣುತ್ತಾನೆ. ಆದರೆ, ಒಳ್ಳೆಯ ಕೆಲಸಗಾರ ಎಂದು ಹೇಳಿ ನನ್ನ ಬಳಿ ಈ ಹುಡುಗನನ್ನ ಕಳುಹಿಸಿದರು ಸುದೀಪ್. ನಾನು ಒಂದು ಸಲ ಮೇಲಿಂದ ಕೆಳಗಡೆ ನೋಡಿದೆ. ಮಗು ಥರಾ ಇದ್ದಾನೆ ಹೇಗಪ್ಪ ಅಂದುಕೊಂಡೆ. ಆಯ್ತು ಅಂತ ಒಪ್ಪಿಕೊಂಡು ಸೆಟ್‌ಗೆ ಹೋದೆ.

ಪಾಪ ಮೊದಲನೇ ದಿನ ನನ್ನ ನೋಡಿ ಹುಡುಗ ಹೆದರಿಕೊಳ್ಳುತ್ತಿದ್ದ. ಆಗ ನಾನು ಹತ್ತಿರ ಹೋಗಿ ಡೈರೆಕ್ಟ್ರೇ ಹೆದರಿಕೊಳ್ಳಬೇಡಿ. ನಾನು ಹೊರಗೆ ಮಾತ್ರ ಅಂಬರೀಶ್, ಸೆಟ್‌ಗೆ ಬಂದ್ರೆ ಆರ್ಟಿಸ್ಟ್. ಡೈರೆಕ್ಟರ್ ಹೇಳಿದಂತೆ ಕೇಳುವ ನಟ ಅಷ್ಟೆ ಎಂದೇ. ಆ ಮೇಲೆ ಎಲ್ಲ ಸರಿ ಹೋಯಿತು ಎಂದರು .

Facebook Auto Publish Powered By : XYZScripts.com