ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ಒನ್ಲೈನಿನಲ್ಲಿ ಲೀಕ್ ಮಾಡಿದವನಿಗೆ ಕಿಚ್ಚ ಕೊಟ್ಟ ವಾರ್ನಿಂಗ್ ಹೇಗಿದೆ ನೋಡಿ

ನಟ ಅಂಬರೀಶ್ ಅವರ ಸಿನಿಮಾದ ಮೇಲೆ ಇದೀಗ ಕದೀಮರು ಕಣ್ಣು ಹಾಕಿದ್ದಾರೆ. ಹೌದು, ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರತಂಡಕ್ಕೆ ಈಗ ಬೇಸರದ ಸಂಗತಿಯೊಂದು ಬಂದಿದೆ. ಅರ್ಥಾತ್ ಈ ಸಿನಿಮಾಗೆ ಈಗ ಪೈರಸಿ ಕಾಟ ಎದುರಾಗಿದೆ. ಕಳೆದ ಶುಕ್ರವಾರ ಬಿಡುಗಡೆಯಾಗಿರುವ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗೆ ಒಂದು ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಆದರೆ, ಇನ್ನೊಂದು ಕಡೆ ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ನಲ್ಲಿ ಲೀಕ್ ಆಗಿದೆ. ಒಳ್ಳೆಯ ಸಿನಿಮಾ ಮಾಡಿದ್ದೀವಿ ಎಂಬ ಸಮಾಧಾನದಲ್ಲಿ ಇದ್ದ ಚಿತ್ರತಂಡಕ್ಕೆ ಈಗ ಹೊಸ ತಲೆನೋವು ಶುರುವಾಗಿದೆ.

ಸಿನಿಮಾ ಪೈರಸಿ ಆಗುರುವ ಬಗ್ಗೆ ನಟ ಸುದೀಪ್ ಕೂಡ ಕೋಪಗೊಂಡಿದ್ದಾರೆ. ಈ ಘಟನೆಯ ಬಗ್ಗೆ ಕಿಚ್ಚ ಟ್ವೀಟ್ ಮೂಲಕ ವಾರ್ನಿಂಗ್ ನೀಡಿದ್ದಾರೆ

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ಸಿನಿಮಾಗೆ ಪ್ರೋತ್ಸಾಹ ನೀಡಿದವರಿಗೆ ಧನ್ಯವಾದ. ಆದರೆ, ಸಿನಿಮಾ ಲೀಕ್ ಮಾಡಿರುವ ವ್ಯಕ್ತಿ ದೂರದಲ್ಲಿ ಇಲ್ಲ. ನಿನ್ನನ್ನ ಹಿಡಿಯುವುದು ತಿಳಿದಿದೆ. ಇದು ಕೋಪದಿಂದ ಹೇಳುತ್ತಿರುವ ಮಾತಲ್ಲ. ಇದು ಸರಿ – ತಪ್ಪಿನ ಪ್ರಶ್ನೆ. C u soon ಎಂದು ವಾರ್ನಿಂಗ್ ನೀಡಿದ್ದಾರೆ.

Facebook Auto Publish Powered By : XYZScripts.com