‘ಅಂಜನಿಪುತ್ರ’ ಪುನೀತ್ ಜೊತೆ ನೀರ್ ದೋಸೆ ಬೆಡಗಿಯ ಡ್ಯಾನ್ಸ್!

ನೀರ್ ದೋಸೆ ಸಿನಿಮಾದ ಚೆಲುವೆ ಹರಿಪ್ರಿಯಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಸಖತ್ ಸ್ಟೆಪ್ ಹಾಕಲಿದ್ದಾರೆ. ಹೌದು ಅಂಜನೀಪುತ್ರ ಸಿನಿಮಾಕ್ಕೆ ಪುನೀತ್ ಜೊತೆಗೆ ಕುಣಿಯಲು ಹರಿಪ್ರಿಯರನ್ನು ಆಯ್ಕೆ ಮಾಡಲಾಗಿದೆಯಂತೆ.

ಪುನೀತ್ ಅವರ ಇಂಟ್ರಡಕ್ಷನ್ ಸಾಂಗ್ ನಲ್ಲಿ ಹರಿಪ್ರಿಯ ಹೆಜ್ಜೆ ಹಾಕಲಿದ್ಧಾರೆ. ಇನ್ನೂ ನಾಳೆಯಿಂದ ಹಾಡಿನ ಚಿತ್ರೀಕರಣ ಪ್ರಾರಂಭವಾಗಲಿದೆ. ‘ಅಂಜನಿ ಪುತ್ರ’ ಸಿನಿಮಾದಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾದ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಬಹುಭಾಷಾ ನಟಿ ರಮ್ಯಾಕೃಷ್ಣ ಕೂಡ ಒಂದು ಪಾತ್ರವನ್ನು ಮಾಡಲಿದ್ದಾರೆ.

ಈ ಸಿನಿಮಾವನ್ನು ಹರ್ಷ ನಿರ್ದೇಶಿಸುತ್ತಿದ್ದು, ಎಂ.ಎನ್.ಕೆ ಮೂವೀಸ್ ಅಡಿಯಲ್ಲಿ ಎಂ.ಎನ್.ಕುಮಾರ್ ಮತ್ತು ಜಯಶ್ರೀ ದೇವಿ ಈ ಚಿತ್ರವನ್ನ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಈ ಸಿನಿಮಾಕ್ಕೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಮ್ಯೂಸಿಕ್ ಕಮಾಲ್ ಮಾಡಲಿದ್ದಾರೆ.

Courtesy: Kannada News Now

Facebook Auto Publish Powered By : XYZScripts.com